ರಂಗಸಮುದ್ರ-ಮಾವಿನಳ್ಳ ಸೇತುವೆ ಬಳಿ ಬರೆ ಕುಸಿತ: ತಾತ್ಕಾಲಿಕ ದುರಸ್ತಿ ಕಾರ್ಯ!: ಸಂಚಾರಕ್ಕೆ ಅನುವು

ರಂಗಸಮುದ್ರ-ಮಾವಿನಳ್ಳ ಸೇತುವೆ ಬಳಿ ಬರೆ ಕುಸಿತ: ತಾತ್ಕಾಲಿಕ ದುರಸ್ತಿ ಕಾರ್ಯ!: ಸಂಚಾರಕ್ಕೆ ಅನುವು

ಕುಶಾಲನಗರ:ತಾಲ್ಲೂಕಿನ ರಂಗಸಮುದ್ರ ಮಾವಿನ ಹಳ್ಳ ಸೇತುವೆ ಪಕ್ಕದಲ್ಲಿ ತೀವ್ರ ಮಳೆಯಿಂದಾಗಿ ಬರೆ ಕುಸಿತ ಉಂಟಾಗಿ ರಸ್ತೆ ಸಂಚಾರ ಅಪಾಯದ ಸ್ಥಿತಿಯಲ್ಲಿತ್ತು. ಶಾಸಕ ಡಾ.ಮಂತರ್ ಗೌಡ ರವರು ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ದುರಸ್ತಿ ಕಾರ್ಯಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.