ಕಾಕೋಟುಪರಂಬು: ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಸಮವಸ್ತ್ರ ವಿತರಣೆ

ಕಾಕೋಟುಪರಂಬು: ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ   ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಸಮವಸ್ತ್ರ ವಿತರಣೆ

ಕಡಂಗ:ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳುಮಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿರಾಜಪೇಟೆ ಶಾಸಕರಾದ ಎ ಎಸ್ ಪೊನ್ನಣ್ಣ ನವರ 51ನೇ ಹುಟ್ಟುಹಬ್ಬದ ಪ್ರಯುಕ್ತ ಬೊಳ್ಳುಮಾಡು ಪಾರಾಣೆ ಕುಂಜಲಗೇರಿ, ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಸಮವಸ್ತ್ರಗಳನ್ನು ವಿತರಿಸಿದರು.ಈ ಸಂದರ್ಭ ಬಟ್ಟೆಕಾಳಂಡ ರಾಜ ದಿನೇಶ್, ದಯಾ ರೈ, ಬೋವ್ವೆರಿಯಂಡ ಅಜಿತ್, ಚಿಯಂಡಿರ ಲೋಕೇಶ್ ಮಾದಯ್ಯ,ಪಾಲಕಂಡ ಪ್ರವೀಣ್, ಚೋಟ್ಟೆರ ರಮೇಶ್, ಜಗನ್,ಅಲ್ಲಪ್ಪಿರ ಜೀವನ, ಮುಂಡಂಡ ಅನಿಲ್, ಚರ್ಮಂಡ ಲವ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವರದಿ:ನೌಫಲ್