ಕೊಂಡಂಗೇರಿ:ರಸ್ತೆ ಹಾಗೂ ಸೇತುವೆ ಲೋಕಾರ್ಪಣೆ ಮಾಡಿದ ಎಎಸ್ ಪೊನ್ನಣ್ಣ

ಕೊಂಡಂಗೇರಿ:ರಸ್ತೆ ಹಾಗೂ ಸೇತುವೆ ಲೋಕಾರ್ಪಣೆ  ಮಾಡಿದ ಎಎಸ್ ಪೊನ್ನಣ್ಣ

ವಿರಾಜಪೇಟೆ: ತಾಲೂಕಿನ, ಕೊಂಡಂಗೇರಿ,ಹಾಲುಗುಂದ ಗ್ರಾಮ ವ್ಯಾಪ್ತಿಯ ಅತ್ತಪಟ್ಟಿ ಅಂಗನವಾಡಿಯಿಂದ ಕೇತುಮೊಟ್ಟೆ ಕಾಲೋನಿವರೆಗಿನ ನೂತನ ರಸ್ತೆಯನ್ನು ಹಾಗೂ ಸೇತುವೆಯನ್ನು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಲೋಕಾರ್ಪಣೆ ಮಾಡಿದರು. ಈ ಪ್ರತ್ಯೇಕ ಕಾಮಗಾರಿಗಳು ರಸ್ತೆಗೆ 15ಲಕ್ಷ ಹಾಗೂ ಸೇತುವೆಗೆ 15 ಲಕ್ಷಗಳಲ್ಲಿ ನಿರ್ಮಾಣವಾಗಿದ್ದು, ಈ ಕುರಿತು ಬೇಡಿಕೆಯನ್ನು ಈ ಹಿಂದೆ, ಸ್ಥಳೀಯ ಮುಖಂಡರು ಶಾಸಕರಿಗೆ ಸಲ್ಲಿಸಿದ್ದರು. ಶಾಸಕರ ಕ್ಷಿಪ್ರ ಕಾರ್ಯವೈಖರಿಗೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದರು.

ಮಾತನಾಡಿದ ಶಾಸಕರು, ಗುಣಮಟ್ಟದ ಕಾಮಗಾರಿ ಇದಾಗಿದ್ದು ಮುಂದಿನ ದಿನಗಳಲ್ಲಿ ಮಳೆಗಾಲ ಹಾಗೂ ಇನ್ನಿತರ ಸಮಯಗಳಲ್ಲಿ ಈ ಭಾಗದಲ್ಲಿ ಸಂಚರಿಸುವ ಜನರಿಗೆ ಇದು ಅನುಕೂಲವಾಗಿ ಪರಿಣಮಿಸಲಿದೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರರಾದ ಪಟ್ಟಡ ರಂಜಿ ಪೂಣಚ್ಚ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಂದಿಕಂಡ ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಮಾನ್ ಅಂದಾಯಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರಾದ ರಫೀಕ್, ವಲಯ ಅಧ್ಯಕ್ಷ ಅಬ್ದುಲ್ಲ, ಹಾಲುಗುಂದ ವಲಯ ಅಧ್ಯಕ್ಷರಾದ ಚೀಲು,ಲಕ್ಷ್ಮಣ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.