ಕುಂಜಿಲ: ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಗೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸೌಕತ್ ಅಲಿ ಆಯ್ಕೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಕುಂಜಿಲ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.ಕುಂಜಿಲ ಪೈನರಿ ಮದರಸ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ 6ನೇ ವರ್ಷವು ಅಧ್ಯಕ್ಷರಾಗಿದ್ದ ಎಂ.ಎ. ಸೌಕತ್ ಅಲಿ ನೇತೃತ್ವದ ಸಮಿತಿ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷರಾಗಿ ಎಂ.ಎ.ಸೌಕತ್ ಅಲಿ,ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ವಿ.ಎ,ಪ್ರಧಾನ ಕಾರ್ಯದರ್ಶಿಯಾಗಿ ಸಈದ್ ಪಿ.ಎಚ್,ಕೋಶಾಧಿಕಾರಿಯಾಗಿ ಹಂಸ ಕುಂಡಂಡ, ದರ್ಸ್ ಸಮಿತಿಯ ಅಧ್ಯಕ್ಷರಾಗಿ ಹಂಸ ತರಮಲ್,ಕಾರ್ಯದರ್ಶಿಯಾಗಿ ಶಂಸುದ್ದೀನ್ ಪಿಎ,ರಿಲೀಫ್ ಸಮಿತಿಯ ಅಧ್ಯಕ್ಷರಾಗಿ ಬಷೀರ್ ಪಿ.ಎ,ಕಾರ್ಯದರ್ಶಿಯಾಗಿ ಹಾರಿಸ್ ಝೃನಿ, ನೂತನ ಮಸೀದಿಯ ಸಮಿತಿಯ ಕಾರ್ಯದರ್ಶಿಯಾಗಿ ಮೊಯಿದ್ದೀನ್ ಕುಂಞಿ,ಸಹ ಕಾರ್ಯದರ್ಶಿಯಾಗಿ ಸಮೀರ್ ಎಂ.ಎಚ್ ಆಯ್ಕೆಯಾದರು.