ಹೊದವಾಡದ ಹೈದ್ರೂಸ್ ಜುಮಾ ಮಸೀದಿಗೆ ಅನುದಾನ ಬಿಡುಗಡೆಗೊಳಿಸಿದ ಸಚಿವ ಜಮೀರ್ ಅಹ್ಮದ್

ಹೊದವಾಡದ ಹೈದ್ರೂಸ್ ಜುಮಾ ಮಸೀದಿಗೆ ಅನುದಾನ ಬಿಡುಗಡೆಗೊಳಿಸಿದ ಸಚಿವ ಜಮೀರ್ ಅಹ್ಮದ್

ಮಡಿಕೇರಿ:ಬೆಂಗಳೂರಿನ ವಖ್ಫ್ ಬೋರ್ಡ್‌ ಕಛೇರಿಯಲ್ಲಿ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡರವರ ನೇತೃತ್ವದಲ್ಲಿ,ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ‌ ಕತ್ತಣಿರ ಹಾಗೂ ಹೊದವಾಡ ಹೈದ್ರೂಸ್ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್, ವಖ್ಫ್ ಮತ್ತು ವಸತಿ ಸಚಿವರಾದ ಜಮೀರ್ ಅಹ್ಮದ್ ರವರನ್ನು ಭೇಟಿ ಮಾಡಿ, ಮಡಿಕೇರಿ ತಾಲ್ಲೂಕಿನ ಹೊದವಾಡದ ಹೈದ್ರೂಸ್ ಜುಮಾ ಮಸೀದಿ ಹಾಗೂ ಮದರಸ ಅಭಿವೃದ್ಧಿ ಗಾಗಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದರು.ತಕ್ಷಣ ಸ್ಪಂದಿಸಿದ ಸಚಿವ ಜಮೀರ್ ಅಹ್ಮದ್ ಅನುದಾನ ಬಿಡುಗಡೆಗೊಳಿಸಿದರು.

ಅನುದಾನ ಬಿಡುಗಡೆ ಮಾಡಲು ಸಹಕರಿಸಿದ ಶಾಸಕರಾದ ಡಾ. ಮಂತರ್ ಗೌಡರ ಹಾಗೂ ಜಿಲ್ಲಾ ಯುವ‌ ಕಾಂಗ್ರೆಸ್ ಉಪಾಧ್ಯಕ್ಷರಾದ ಮೈಸಿ ಕತ್ತಣಿರ ಹಾಗೂ ಹೈದ್ರೂಸ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಹ್ಮದ್ ರವರಿಗೆ ಮಸೀದಿ ಆಡಳಿತ ಮಂಡಳಿ‌ ಕೃತಜ್ಞತೆ ಸಲ್ಲಿಸಿದ್ದಾರೆ.