ಶಾಸಕ ಡಾ.ಮಂತರ್ ಗೌಡ ಪ್ರಯತ್ನ: ಹಾರಂಗಿಗೆ ಕಮಾನು ಸೇತುವೆ ಭಾಗ್ಯ

ಶಾಸಕ ಡಾ.ಮಂತರ್ ಗೌಡ ಪ್ರಯತ್ನ:  ಹಾರಂಗಿಗೆ ಕಮಾನು ಸೇತುವೆ ಭಾಗ್ಯ
ಫೋಟೋ:ಹಾರಂಗಿ‌ ಜಲಾಶಯ

ಕುಶಾಲನಗರ:ಹುಲುಗುಂದ ಗ್ರಾಮದ ಬಳಿ ಹಾರಂಗಿ ಜಲಾಶಯದ ಕೆಳಭಾಗದಲ್ಲಿ ಕಮಾನು ಸೇತುವೆಯನ್ನು ರೂ.36.50 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ರಾಜ್ಯ ಸಕಾ೯ರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ನೀಡಿದ ಪ್ರಸ್ತಾವನೆಯನ್ನು ಅಂಗೀಕರಿಸಿ ಸಕಾ೯ರ ಇದೀಗ ಕಮಾನು ಸೇತುವೆಗೆ ಅನುಮೋದನೆ ನೀಡಿದೆ.