ನಾಪೋಕ್ಲು:ಆರ್ಭಟಿಸುತ್ತಿರುವ ಆರಿದ್ರಾ ಮಳೆ:ಹಲವು ರಸ್ತೆ ಸಂಪರ್ಕ ಕಡಿತ

ನಾಪೋಕ್ಲು:ಆರ್ಭಟಿಸುತ್ತಿರುವ ಆರಿದ್ರಾ ಮಳೆ:ಹಲವು ರಸ್ತೆ ಸಂಪರ್ಕ ಕಡಿತ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು:ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಪ್ರವಾಹ ಆವರಿಸಿದ್ದು ಸಂಚಾರ ಸ್ಥಗಿತಗೊಂಡಿದೆ.ಮೂರ್ನಾಡು ರಸ್ತೆಯ ಬೊಳಿ ಬಾಣೆ ಬಳಿಯಲ್ಲಿ ರಸ್ತೆಯಲ್ಲಿ ಕಾವೇರಿ ನದಿ ನೀರು ನಿಂತಿದ್ದು ಪ್ರವಾಹದ ಪರಿಸ್ಥಿತಿ ಎದುರಾಗಿದ್ದು,ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನಾಪೋಕ್ಲು ಕೈಕಾಡು ಪಾರಾಣೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲೂ ಮಳೆಯಿಂದಾಗಿ ನೀರು ನಿಂತಿದ್ದು,ಕೈಕಾಡು ರಸ್ತೆಯಲ್ಲಿರುವ ಎತ್ತು ಕಡವು ಹೊಳೆ ರಸ್ತೆಯಲ್ಲಿ ಮೈದುಂಬಿ ಹರಿದು ಸಂಚಾರ ಸ್ಥಗಿತಗೊಂಡಿದೆ.

ನಾಪೋಕ್ಲು ಬೇತು ಗ್ರಾಮದ ಮೂಲಕ ಬಲಮುರಿಗ್ರಾಮಕ್ಕೆ ಸಂಪರ್ಕಿಸುವ ಮಕ್ಕಿ ಕಡವು ಎಂಬಲ್ಲಿ ರಸ್ತೆಗೆ ಪ್ರವಾಹ ಆವರಿಸಿ ಸಂಚಾರ ಸ್ಥಗಿತಗೊಂಡಿದೆ.ನಾಪೋಕ್ಲು ಕೊಟ್ಟಮುಡಿ ಬೆಟ್ಟಗೇರಿ ಸಂಪರ್ಕಿಸುವ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು ಮಳೆ ಮುಂದುವರೆದರೆ ಕೊಟ್ಟಮುಡಿ ರಸ್ತೆಯಲ್ಲಿ ಪ್ರವಾಹ ಬಂದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಕಂಡು ಬಂದಿದೆ.

ಆರಿದ್ರ ಮಳೆಯ ಆರ್ಭಟಕ್ಕೆ ಕಕ್ಕಬ್ಬೆ,ನಾಪೋಕ್ಲು ಬಳಿಯ ಚೆರಿಯಪರಂಬು ರಸ್ತೆಯಲ್ಲೂ ಪ್ರವಾಹ ಬಂದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.