ನವಗ್ರಾಮ: ವಿದ್ಯುತ್ ಅಳವಡಿಸಲು ಮನವಿ, ಚೆಸ್ಕಾಂ ಅಧಿಕಾರಿಯಿಂದ ಪರಿಶೀಲನೆ

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮಕ್ಕೆ ವಿದ್ಯುತ್ ಕಂಬಗಳ ಅವಶ್ಯಕತೆ ಇದೆ ಎಂದು ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಚೆಸ್ಕಾಂ ಗೆ ಮನವಿ ಸಲ್ಲಿಸಿದ ಹಿನ್ನಲೆ ಚೆಸ್ಕಾಂ ಅಧಿಕಾರಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ನವಗ್ರಾಮದ ಅಂಗನವಾಡಿ ಬಳಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಒಂದೇ ವಿದ್ಯುತ್ ಕಂಬವಿರುವ ಬಗ್ಗೆ ಸ್ಥಳೀಯರು "ವಾರ್ಡ್ ಭೇಟಿ" ಸಂದರ್ಭ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಗಮನಕ್ಕೆ ತಂದಿದ್ದರು. ನಂತರ ಸ್ಥಳ ಪರಿಶೀಲಿಸಿದ ಕೆ.ಬಿ.ಶಂಶುದ್ಧೀನ್ ಅವರು, ಸಂಬಂಧಿಸಿದ ಚೆಸ್ಕಾಂ ನ ಸಹಾಯಕ ನಿರ್ವಾಹಕ ಅಭಿಯಂತರ ಗಮನಕ್ಕೆ ತಂದಿದ್ದರು. ಅದರಂತೆ ಚೆಸ್ಕಾಂ ನ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದು, ವಿದ್ಯುತ್ ಕಂಬ ಅಳವಡಿಸುವುದಾಗಿ ಭರಸವೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್, ನವಗ್ರಾಮದ ಅಂಗನವಾಡಿ ಬಳಿ ಸುಮಾರು ೧೧ ಮನೆಗಳಿಗೆ ಒಂದೇ ವಿದ್ಯುತ್ ಕಂಬವಿದೆ. ನಾಳೆಯ ದಿನ ಅನಾಹುತ ಸಂಭವಿಸುವ ಸಾಧ್ಯತೆಗಳೂ ಇದೆ. ಆದ್ದರಿಂದ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಎಂದು ಸಂಬಂಧಿಸಿದ ಚೆಸ್ಕಾಂ ನ ಎಇಇ ಗೆ ಮನವಿ ಮಾಡಿದ ಕೂಡಲೇ ಸ್ಥಳಪರಿಶೀಲನೆ ನಡೆಸಿ ವಿದ್ಯುತ್ ಕಂಬ ಅಳವಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಗುಡ್ಡ ಪ್ರದೇಶವಾದ್ದಂದ ಕಾಡು ಪ್ರಾಣಿಗಳ ಕಾಟ ಹೆಚ್ಚಿದ್ದು, ವಿದ್ಯುತ್ ಕಂಬ ಅಳವಡಿಕೆಯ ನಂತರ ಕಂಬಕ್ಕೆ ವಿದ್ಯುತ್ ದೀಪ ಅಳವಡಿಸಲಾಗುವುದು ಎಂದರು. ಈ ಸಂದರ್ಭ ಸ್ಥಳೀಯರು ಇದ್ದರು.