ಲೋಕೋಪಯೋಗಿ ಸಚಿವರಾದ ಜಾರಕಿಹೊಳಿ ನೇತೃತ್ವದಲ್ಲಿ ರಾಜ್ಯದ 12 ಮೂಲ ಬುಡಕಟ್ಟು ಜನರ ಸಮಸ್ಯೆಗಳ ಕುರಿತು ಸಭೆ ಕೊಡಗು ಜಿಲ್ಲೆಯ ಬುಡಕಟ್ಟು ಜನಾಂಗದ ಮುಖಂಡರು ಭಾಗಿ

ಮಡಿಕೇರಿ:ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕರ್ನಾಟಕ ರಾಜ್ಯದ 12 ಮೂಲ ಬುಡಕಟ್ಟು ಜನರ ಸಮಸ್ಯೆಗಳ ಕುರಿತು ಅವರ ಕಛೇರಿಯಲ್ಲಿ ಸಭೆ ನಡೆಸಿದರು. ಸಭೆಗೆ ಕೊಡಗು ಜಿಲ್ಲೆಯ ವಿರಾಜಪೇಟೆ ಬುಡಕಟ್ಟು ಕೃಷಿರ ಸಂಘದ ಅಧ್ಯಕ್ಷರಾದ ಸಿದ್ದಪ್ಪ.ಪಿ.ಕೆ, ಮತ್ತು ಪೊನ್ನಂಪೇಟೆ ತಾಲ್ಲೂಕು ಬುಡಕಟ್ಟು ಕೃಷಿರ ಸಂಘದ ಅಧ್ಯಕ್ಷರಾದ ಮುತ್ತಪ್ಪ(ಉದಯ), ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷರದ ಮಣಿಕುಂಞ ಮತ್ತು ಬೋಜಪ್ಪ ಹಾಗೂ ನಾಗರಹೊಳೆ ಜಮ್ಮ ಪಾಳೆ ಹಕ್ಕು ಸ್ಥಾಪನ ಸಮಿತಿಯ ಕಾರ್ಯದರ್ಶಿ ಶಿವು ಜೆ.ಎಸ್ ಭಾಗವಹಿಸಿದ್ದರು.