ನಾಪೋಕ್ಲು ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ರಾಘವೇಂದ್ರ ನೇಮಕ

ನಾಪೋಕ್ಲು ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ರಾಘವೇಂದ್ರ ನೇಮಕ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಪಿ. ಜಿ.ರಾಘವೇಂದ್ರ ಅವರು ನೇಮಕವಾಗಿದ್ದಾರೆ.ಗುಲ್ಬರ್ಗ ಮೂಲದವರಾದ ಇವರು ಈ ಹಿಂದೆ ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈ ಹಿಂದೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿಯಾಗಿದ್ದ ಮಂಜುನಾಥ್ ಅವರು ವರ್ಗಾವಣೆಗೊಂಡು ತೆರವಾಗಿದ್ದ ಸ್ಥಾನಕ್ಕೆ ನೂತನ ಠಾಣಾಧಿಕಾರಿಯಾಗಿ ರಾಘವೇಂದ್ರ ಅವರು ನೇಮಕವಾಗಿದ್ದಾರೆ.