ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ ಹಿನ್ನೆಲೆ,ನಾಳೆ ಮಡಿಕೇರಿಯಲ್ಲಿ ಶಕ್ತಿ-ಸಂಭ್ರಮಾಚರಣೆ

ಮಡಿಕೇರಿ:ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಮತ್ತು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿಯನ್ನು ದಾಟಿರುವ ಹಿನ್ನೆಲೆಯಲ್ಲಿ ಶಕ್ತಿ-ಸಂಭ್ರಮಾಚರಣೆ ಕಾರ್ಯಕ್ರಮ ನಾಳೆ ಸೋಮವಾರ ಪೂರ್ವಾಹ್ನ 1೦ ಗಂಟೆಗೆ ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಶಾಸಕರಾದ ಮಂತರ್ ಗೌಡರವರು ಭಾಗವಹಿಸಲಿದ್ದಾರೆ .ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಕಾಂಗ್ರೆಸ್ ನಾಯಕರುಗಳು ನಾಮ ನಿರ್ದೇಶಿತ ಸದಸ್ಯರುಗಳು ಪಕ್ಷದ ಹಿರಿಯ ಕಿರಿಯ ನಾಯಕರುಗಳುಕಾರ್ಯಕರ್ತರು. ಹೆಚ್ಚಿನ ಮಹಿಳಾ ಫಲಾನುಭವಿಗಳು ಆಗಮಿಸಬೇಕಾಗಿ ಮಡಿಕೇರಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.