ಶನಿವಾರಸಂತೆ: ಸೌಂದರ್ಯ ವರ್ಧಕ ತರಬೇತಿ ಕಾರ್ಯಗಾರ

ಶನಿವಾರಸಂತೆ:  ಸೌಂದರ್ಯ ವರ್ಧಕ ತರಬೇತಿ ಕಾರ್ಯಗಾರ

  ಶನಿವಾರಸಂತೆ:ಸೋಮವಾರಪೇಟೆ ಬ್ಯೂಟಿಶಿಯನ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ಕೊಡಗಿನ ಸೌಂದರ್ಯವರ್ಧಕರಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಶನಿವಾರಸಂತೆ ದೇವ್ ರೆಸಾರ್ಟ್ ನಲ್ಲಿ ಹಮ್ಮಿಕೊಳ್ಳಲಾಯಿತು. 

ಕಾರ್ಯಗಾರವನ್ನು ಬೆಂಗಳೂರಿನ ಮೇಕಪ್ ಕಲಾವಿದೆ ಸೋಮು ಹಾಸನ್ ಉದ್ಘಾಟಿಸಿ ಮಾತನಾಡಿ,ಇಂದು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದ್ದರಿಂದ ಸೌಂದರ್ಯವರ್ಧಕರು ತಮ್ಮ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಎಷ್ಟೇ ಕಲಿತರೂ ಸಾಲದು.ದಿನೇದಿನೇ ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸೌಂಧರ್ಯ ಕ್ಷೇತ್ರದಲ್ಲೂ ಸಹ ಹೊಸ ಬಗೆಯ ತಂತ್ರಜ್ಞಾನ ರೂಪುಗೊಳ್ಳುತ್ತಿದೆ. ಆದರೆ ಕೆಲವು ಸೌಂದರ್ಯವರ್ಧಕರು ಹಳೆಯ ಪದ್ಧತಿಯಂತೆ ನಿರ್ವಹಣೆ ಮಾಡುತ್ತಿರುವುದ್ದರಿಂದ ಸೌಂದರ್ಯ ಗ್ರಾಹಕರು ಇದನ್ನು ಇಷ್ಟ ಪಡುತ್ತಿಲ್ಲ. ಈ ದಿಸೆಯಲ್ಲಿ ಸೌಂದರ್ಯವರ್ಧಕರು ಆಧುನಿಕ ಮತ್ತು ತಂತ್ರಜ್ಞಾನ ಪದ್ಧತಿಯನ್ನು ಅನುಸರಿಸುವ ಮೂಲಕ ಸೌಂಧದರ್ಯ ಕ್ಷೇತ್ರವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಪ್ರತಿಮಾ ಮಾತನಾಡಿ,ಸೌಂದರ್ಯ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಪರಿಚಯಿಸುವ ಉದ್ದೇಶದಿಂದ ಸೌಂದರ್ಯವರ್ಧಕರಿಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸೌಂದರ್ಯ ವಲಯವನ್ನು ಬೆಳೆಸಿದಂತಾಗುತ್ತದೆ. ಆದರೆ ಇಂದಿನ ಸಮಾಜದಲ್ಲಿ ಸೌಂದರ್ಯ ಕ್ಷೇತ್ರದ ಬಗ್ಗೆ ಟೀಕೆ ಮಾಡುವವರು ಸಹ ಇರುತ್ತಾರೆ. ಈ ನಿಟ್ಟಿನಲ್ಲಿ ನಾವೆಲ್ಲಾರೂ ಟೀಕೆ ಟಿಪ್ಪಣಿಗಳನ್ನು ಮೆಟ್ಟಿನಿಂತು ಸಂಘಟನೆಯನ್ನು ಬೆಳೆಸುವಂತೆ ಮನವಿ ಮಾಡಿದರು

ಸಂಘದ ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್ ಮಾತನಾಡಿ,ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸೌಂದರ್ಯ ವಲಯವೂ ಆಧುನಿಕವಾಗಿ ಬದಲಾಗುತ್ತಿದೆ. ಸೋಮವಾರಪೇಟೆ ಸಂಘಟನೆಯು ಇದರ ಬಗ್ಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿರುವುದು ಮತ್ತು ಸಂಘಟನೆಯನ್ನು ಬೆಳೆಸುತ್ತಿರುವುದು ಶ್ಲಾಘನಿಯವಾಗಿದೆ ಎಂದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಅಧ್ಯಕ್ಷೆ ರತ್ನ ಯತೀಶ್, ಪ್ರಧಾನ ಕಾರ್ಯದರ್ಶಿ ಪವಿತ್ರ, ಕುಶಾಲನಗರ ತಾಲೂಕು ಕಾರ್ಯದರ್ಶಿ ತಾಜ್, ಮಡಿಕೇರಿ ತಾಲೂಕು ಕಾರ್ಯದರ್ಶಿ ಜಾನ್ಸಿ, ಮೇಕಪ್ ಕಲಾವಿಧೆ ಆಶಾ, ಚಿರಂತ್ ಮುಂತಾದವರು ಇದ್ದರು. ಈ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.