ಖ್ಯಾತ ಆ್ಯಂಕರ್ ಅನುಶ್ರೀ ಅವರ ಭಾವಿಪತಿ ರೋಷನ್ ಅವರಿಗೂ ಸುಂಟಿಕೊಪ್ಪಕ್ಕೂ ಇದೇ ಲಿಂಕ್!

Aug 25, 2025 - 22:27
 0  2.2k
ಖ್ಯಾತ ಆ್ಯಂಕರ್ ಅನುಶ್ರೀ ಅವರ ಭಾವಿಪತಿ ರೋಷನ್ ಅವರಿಗೂ ಸುಂಟಿಕೊಪ್ಪಕ್ಕೂ ಇದೇ ಲಿಂಕ್!
ರೋಷನ್&ಅನುಶ್ರೀ

ವರದಿ:ಕ್ಯೂಟ್ ಕೂರ್ಗ್ ನ್ಯೂಸ್

ಸುಂಟಿಕೊಪ್ಪ:ಆ್ಯಂಕರ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಅನುಶ್ರೀ ಅವರು ಇದೇ ತಿಂಗಳ 28 ರಂದು ಹಸೆಮಣೆ ಏರಲಿದ್ದಾರೆ. ಅವರು ಬೆಂಗಳೂರು ಹೊರ ವಲಯದಲ್ಲಿರುವ ಕಗ್ಗಲಿಪುರದ ಬೈ ಸ್ಪಾನ್​ಲೈನ್ಸ್ ಸ್ಟುಡಿಯೋಸ್​ನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಮೂಲದ ರೋಷನ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಇತ್ತೀಚಿಗೆ ಅನುಶ್ರೀ ಅವರ ಲಗ್ನ ಪತ್ರಿಕೆ ವೈರಲ್ ಆಗಿದ್ದು, ‘ನೀವೆಲ್ಲ ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ, ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರ’ ಎಂದು ಲಗ್ನ ಪತ್ರಿಕೆಯಲ್ಲಿ ಅನುಶ್ರೀ ಛಾಪಿಸಿದ್ದಾರೆ. ಅನುಶ್ರೀ ಹಾಗೂ ರೋಷನ್ ಅವರದ್ದು ಪ್ರೇಮ ವಿವಾಹ ಎಂದು ಹೇಳಲಾಗಿದೆ. ಈ ಜೋಡಿ ಮೊದಲು ಪುನೀತ್ ಅವರ ಮನೆಯಲ್ಲಿ ಭೇಟಿಯಾಗಿ ತದನಂತರ ಪರಿಚಯ ಬೆಳೆದು, ಪ್ರೇಮಾಂಕುರಗೊಂಡಿತ್ತು.ಈಗ ಪರಸ್ಪರ ಮನೆಯವರ ಒಪ್ಪಿಗೆಯೊಂದಿಗೆ ಬಾಳ ಸಂಗಾತಿಗಳಾಗುತ್ತಿದ್ದಾರೆ. ಅನುಶ್ರೀರವರ ಭಾವಿಪತಿ ರೋಷನ್ ಮೂಲತಃ ಕೊಡಗು ಜಿಲ್ಲೆ ಸುಂಟಿಕೊಪ್ಪ ಮೂಲದವರು..ಈ ಹಿಂದೆ ಸುಂಟಿಕೊಪ್ಪದಲ್ಲಿ ಎಲೆಕ್ಟ್ರೀಷಿಯನ್ ವೃತ್ತಿ ಮಾಡುತ್ತಿದ್ದ ರಾಮಮೂರ್ತಿ ಮತ್ತು ಸಿಸಿಲಿಯ ದಂಪತಿಯ ಪುತ್ರ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪಡೆದಿದ್ದು ಸುಂಟಿಕೊಪ್ಪದಲ್ಲಿ. ದಶಕದ ಹಿಂದೆ ಇವರ ತಂದೆ ತಾಯಿ ಸುಂಟಿಕೊಪ್ಪ ತೊರೆದು ಪ್ರಸ್ತುತ ಕುಶಾಲನಗರದಲ್ಲಿ ನೆಲೆಸಿದ್ದಾರೆ. ಉನ್ನತ ಶಿಕ್ಷಣ ಪಡೆದು ರೋಷನ್ ಬೆಂಗಳೂರಿನಲ್ಲಿ ತಮ್ಮದೇ ಆದ ಉದ್ಯಮವನ್ನು ಆರಂಭಿಸಿದ್ದರು. ತಾ. 28 ರಂದು ಅನುಶ್ರೀ ಮತ್ತು ರೋಷನ್ ಜೋಡಿ ತಮ್ಮ ಆಪ್ತರು, ಕುಟುಂಬದವರು ಹಾಗೂ ಗೆಳೆಯರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1