ಸಿದ್ದಾಪುರ:ನಾಳೆ ಅಸ್ಸಿರಾತಲ್ ಮುಸ್ತಖೀಂ ಕಾರ್ಯಕ್ರಮ

ಸಿದ್ದಾಪುರ:ಆದರ್ಶ ಪರಿಶುದ್ಧತೆಯ ಶತಮಾನಗಳಿಂದ" ಎಂಬ ದ್ಯೇಯ ವಾಕ್ಯದಡಿಯಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ 100 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಪೋಷಕ ಸಂಘಟನೆಗಳ ಕಾರ್ಯವೈಖರಿಗಳಲ್ಲಿ ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಭಾನುವಾರ ಸಂಜೆ 7 ಘಂಟೆಗೆ ಸಿದ್ದಾಪುರದ ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ "ಅಸ್ಸಿರಾತಲ್ ಮುಸ್ತಖೀಂ " ಎಂಬ ಶೀರ್ಷಿಕೆಯಲ್ಲಿ ಉದಾತ್ತ ದೀನಿನ ನೈಜ ಪಾರಂಪರ್ಯದ ವಿಶ್ಲೇಷಣೆ ಕಾರ್ಯಕ್ರಮ ಮತ್ತು ಕೊಡಗು ಜಿಲ್ಲಾ ಸಮಸ್ತದ ಮತ್ತು ಪೋಷಕ ಸಂಘಟನೆಗಳ ಜಿಲ್ಲೆಯಲ್ಲಿ ಕ್ರಿಯಾತ್ಮಕವಾಗಿ ನೇತೃತ್ವ ನೀಡಿ ಇದೀಗ ಸಮಸ್ತ ಕೇಂದ್ರ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ಪ್ರಧಾನ ಕಾರ್ಯದರ್ಶಿ ಯಾಗಿ ನೇಮಕಗೊಂಡ ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಗೋಣಿಕೊಪ್ಪ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಉಪ ಖಾಝಿಗಳು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಎಂ ಅಬ್ದುಲ್ಲ ಫೈಝಿ ಉಸ್ತಾದ್ ಉದ್ಘಾಟಿಸಲಿದ್ದಾರೆ ಮುಖ್ಯ ಭಾಷಣಕಾರರಾಗಿ ಖ್ಯಾತ ವಾಗ್ಮಿ ಸುನ್ನತ್ ಜಮಾಅತಿನ ವೇದಿಕೆಗಳಲ್ಲಿ ಮಿನುಗು ತಾರೆ ಮುಸ್ತಫ ಅಶ್ರಫಿ ಕಕ್ಕುಪಡಿ ವಿಷಯ ಮಂಡಿಸಲಿದ್ದಾರೆ. ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ ಸಿ ಉಸ್ಮಾನ್ ಫೈಝಿ ಉಮರ್ ಫೈಝಿ ಆರಿಫ್ ಫೈಝಿ ಮತ್ತು ಜಿಲ್ಲೆ ನೇತಾರರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾದಿಕಾರಿ ಎಂ ತಮ್ಲೀಖ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.