ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಖ್ಯಾತ ಯೂಟ್ಯೂಬರ್ ಕಾಸರಗೋಡುವಿನ ಮೊಹಮ್ಮದ್ ಸಾಲಿ(ಶಾಲು) ಅರೆಸ್ಟ್......

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಖ್ಯಾತ ಯೂಟ್ಯೂಬರ್ ಕಾಸರಗೋಡುವಿನ ಮೊಹಮ್ಮದ್ ಸಾಲಿ(ಶಾಲು) ಅರೆಸ್ಟ್......

ಕೊಡಗು ಜಿಲ್ಲೆಯಲ್ಲಿ ನಡೆದ ಕೆಲವು ಲಾಟರಿ ಸ್ಕೀಂಗಳ ಪ್ರಚಾರ ರಾಯಭಾರಿಯಾಗಿದ್ದ ವ್ಲಾಗರ್.

ಮಂಗಳೂರು : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪದಡಿ ಕೇರಳದ ಕೊಯಿಲಾಂಡಿ ಪೋಲಿಸರು ಕಾಸರಗೋಡಿನ ಖ್ಯಾತ ಯ್ಯೂಟೂಬರ್ ಮೊಹಮ್ಮದ್ ಸಾಲಿ (ಶಾಲು) ಎಂಬಾತನನ್ನು ಬಂಧಿಸಿದ್ದಾರೆ.

ವಿವಾಹ ವಾಗ್ದಾನ ನೀಡಿ ಅಪ್ರಾಪ್ತೆಯನ್ನು ವಿದೇಶದಲ್ಲಿ ಅತ್ಯಾಚಾರ ನಡೆಸಿದೆನ್ನಲಾಗಿದ್ದು, ಪೋಲಿಸರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. 2016ರಲ್ಲಿ ವಿವಾಹವಾದ ಇತನಿಗೆ ಮೂವರು ಮಕ್ಕಳದ್ದಾರೆ. ಸೋಶಿಯಲ್ ಮೀಡಿಯ ಮೂಲಕ ಈ ಅಪ್ರಾಪ್ತೆಯ ಪರಿಚಯವಾಗಿತ್ತು . ಈ ಯ್ಯೂಟ್ಯೂಬರ್ ಕೊಡಗು ಜಿಲ್ಲೆಯಲ್ಲಿ ನಡೆದ ಕೆಲವು ಲಾಟರಿ ಸ್ಕೀಂಗಳ ಪ್ರಚಾರ ರಾಯಭಾರಿಯಾಗಿದ್ದ.