ಅನ್ವಾರುಲ್ ಹುದಾ ವಿದ್ಯಾಸಂಸ್ಥೆ ವತಿಯಿಂದ ಎಸ್ಎಸ್ಎಫ್ ಹಾಗೂ ಎಸ್.ವೈಎಸ್ ಜಿಲ್ಲಾ ನಾಯಕರಿಗೆ ಸನ್ಮಾನ

ಅನ್ವಾರುಲ್ ಹುದಾ ವಿದ್ಯಾಸಂಸ್ಥೆ ವತಿಯಿಂದ  ಎಸ್ಎಸ್ಎಫ್ ಹಾಗೂ  ಎಸ್.ವೈಎಸ್ ಜಿಲ್ಲಾ ನಾಯಕರಿಗೆ ಸನ್ಮಾನ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ವಿರಾಜಪೇಟೆಯ ಅನ್ವಾರುಲ್ ಹುದಾ ವತಿಯಿಂದ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಸಂಘಟನೆಯ ಜಿಲ್ಲಾ ಸಮಿತಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

ವಿರಾಜಪೇಟೆಯ ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಹಾಗೂ ಸಯ್ಯದ್ ಮಹ್ದಿ ತಙ್ಙಳ್ ರವರ ನೇತೃತ್ವದಲ್ಲಿ ಎಸ್.ವೈ.ಎಸ್ ನ ನೂತನ ಜಿಲ್ಲಾಧ್ಯಕ್ಷರಾದ ಮುನೀರ್ ಮಲ್ಹರಿ,ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,ಕೋಶಾಧಿಕಾರಿ ಶರೀಫ್ ಮಾಸ್ಟರ್ ಹೊಸತೋಟ ಹಾಗೂ ಎಸ್ ಎಸ್ ಎಫ್ ನ ನೂತನ ಜಿಲ್ಲಾಧ್ಯಕ್ಷರಾದ ಕಮರುದ್ದೀನ್ ಅನ್ವಾರಿ ಸಖಾಫಿ,ಪ್ರಧಾನ ಕಾರ್ಯದರ್ಶಿ ಜುನೈದ್,ಕೊಶಾಧಿಕಾರಿ ನವಾಸ್ ಮದನಿಯವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸರ್ವಸದಸ್ಯರು ಪಾಲ್ಗೊಂಡಿದ್ದರು.