ಅಮ್ಮತ್ರಿ: 34ನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಅಹೋರಾತ್ರಿ ಧರಣಿ!! ಕ್ಯಾರೇ ಎನ್ನದ ಜಿಲ್ಲಾಡಳಿತ

ಅಮ್ಮತ್ರಿ: 34ನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಅಹೋರಾತ್ರಿ ಧರಣಿ!!  ಕ್ಯಾರೇ ಎನ್ನದ ಜಿಲ್ಲಾಡಳಿತ
ಅಮ್ಮತ್ರಿ: 34ನೇ ದಿನಕ್ಕೆ ಕಾಲಿಟ್ಟ ನಿವೇಶನ ರಹಿತರ ಅಹೋರಾತ್ರಿ ಧರಣಿ!!  ಕ್ಯಾರೇ ಎನ್ನದ ಜಿಲ್ಲಾಡಳಿತ

ಸಿದ್ದಾಪುರ(Coorgdaily):ಅಮ್ಮತ್ತಿಯ ನಾಡ ಕಛೇರಿ ಮುಂಭಾಗದಲ್ಲಿ ಟೆಂಡ್ ಹಾಕಿ ಅಹೋರಾತ್ರಿ ಧರಣಿ ನಡೆಸುತ್ತಿರುವ ನಿವೇಶನ ರಹಿತರ ಪ್ರತಿಭಟನೆ ಇಂದಿಗೆ 34ನೇ ದಿನಕ್ಕೆ ಕಾಲಿಟ್ಟಿದೆ.

ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಆದಿವಾಸಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಕಳೆದ 34 ದಿನಗಳಿಂದ ನಿವೇಶನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು ಕೂಡ ಜಿಲ್ಲಾಡಳಿತ ಮಾತ್ರ ಕ್ಯಾರೇ ಎನ್ನದೆ ಇತ್ತ ತಿರುಗಿ ನೋಡಿಯೇ ಇಲ್ಲ‌.ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ-ಗಾಳಿಯನ್ನು ಲೆಕ್ಕಿಸದೆ ಅಹೋರಾತ್ರಿ ಟೆಂಡ್ ನಲ್ಲೇ ನಿವೇಶನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಕಳೆದ 34 ದಿನ ಕಳೆದರೂ ಕೂಡ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಇತ್ತ ತಿರುಗಿ ಕೂಡ ನೋಡಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದ್ದಾರೆ‌.