ಆಲ್ ಸ್ಟಾರ್ ಯೂತ್ ಕ್ಲಬ್: ಕೊಡಗು ವರ್ಲ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಸಂಸದ ಯದುವೀರ್ ಗೆ ಆಹ್ವಾನ

ಆಲ್ ಸ್ಟಾರ್ ಯೂತ್ ಕ್ಲಬ್: ಕೊಡಗು ವರ್ಲ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಸಂಸದ ಯದುವೀರ್ ಗೆ ಆಹ್ವಾನ
ಆಲ್ ಸ್ಟಾರ್ ಯೂತ್ ಕ್ಲಬ್: ಕೊಡಗು ವರ್ಲ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಸಂಸದ ಯದುವೀರ್ ಗೆ ಆಹ್ವಾನ

ಮಡಿಕೇರಿ: ಮೇ ತಿಂಗಳ 01ರಿಂದ 4ರವರೆಗೆ ಗೋಣಿಕೊಪ್ಪಲಿನ ‌ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿರುವ,ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪ ಆಯೋಜಿಸಿರುವ ಕೊಡಗು ವರ್ಲ್ಡ್ ‌ಕಪ್,ಆಲ್ ಇಂಡಿಯಾ ‌ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾವಳಿಗೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಒಡೆಯರ್ ಅವರಿಗೆ ಫುಟ್ಬಾಲ್ ಪಂದ್ಯಾವಳಿಗೆ ಆಹ್ವಾನ ನೀಡಲಾಗಿದೆ.

ಆಲ್ ಸ್ಟಾರ್ ಯೂತ್ ಕ್ಲಬ್ ಪ್ರಮುಖರಾದ ಶೀಲಾ ಬೋಪಣ್ಣ ಅವರ ನೇತೃತ್ವ ತಂಡವು ಸಂಸದ ಯದುವೀರ್ ಒಡೆಯರ್ ಅವರನ್ನು ಭೇಟಿ ಮಾಡಿ ಫುಟ್ಬಾಲ್ ಪಂದ್ಯಾವಳಿಗೆ ಆಗಮಿಸುವಂತೆ ಕೋರಿದ್ದು,ಆಹ್ವಾನ ಸ್ವೀಕರಿಸಿದ ಸಂಸದ ಯದುವೀರ್ ಒಡೆಯರ್ ಪಂದ್ಯಾವಳಿಗೆ ಶುಭಕೋರಿ,ಒಂದು ದಿನ ಫುಟ್ಬಾಲ್ ಪಂದ್ಯಾವಳಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ.ಈ ಸಂದರ್ಭ ಆಲ್ ಸ್ಟಾರ್ ಯೂತ್ ಕ್ಲಬ್ ಪದಾಧಿಕಾರಿಗಳಾದ ರನೀಸ್,ಶಾನಿಫ್,ಸುಮನ್ ಹಾಗೂ ಶ್ರೀನಿ ಇದ್ದರು.