ಎಸ್ ಜೆ ಎಂ ಮೂರ್ನಾಡು ಶಾಖೆಯ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆಎಂ) ಮೂರ್ನಾಡು ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಾಪೋಕ್ಲು ಬಳಿಯ ಕಿಕ್ಕರೆಯಲ್ಲಿ ನಡೆಯಿತು.
ಕಿಕ್ಕರೆಯ ಮದರಸ ಸಭಾಂಗಣ ದಲ್ಲಿ ಹನೀಫ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಯೂಸುಫ್ ಸಖಾಫಿ ಉದ್ಘಾಟಿಸಿದರು.ಸಭೆಯಲ್ಲಿ ರಿಟೈನಿಂಗ್ ಆಫೀಸರ್ ಹಂಝ ರಹ್ಮಾನಿ ಪಡಿಯಾಣಿ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಹಸ್ಸನ್ ಸಅದಿ,ಪ್ರಧಾನ ಕಾರ್ಯದರ್ಶಿಯಾಗಿ ಉನೈಸ್ ಸುಲ್ತಾನಿ,ಕೋಶಾಧಿಕಾರಿಯಾಗಿ ಅಬ್ಬಾಸ್ ಸಖಾಫಿ,ಎಕ್ಸಾಂ ವೆಲ್ಫೇರ್ ಐಟಿ ಉಪಾಧ್ಯಕ್ಷರಾಗಿ ಅಬ್ದುಲ್ ಜಲೀಲ್ ಸಖಾಫಿ, ಕಾರ್ಯದರ್ಶಿಯಾಗಿ ನೌಷಾದ್ ಲತೀಫಿ,ಮಿಶನರಿ,ಟ್ರೈನಿಂಗ್ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಝುಹ್ರಿ,ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ಸಖಾಫಿ,ಮ್ಯಾಗ್ ಝೀನ್ ಉಪಾಧ್ಯಕ್ಷರಾಗಿ ಮುಹಮ್ಮದ್ ಸಖಾಫಿ,ಕಾರ್ಯದರ್ಶಿಯಾಗಿ ಖಾತಿಂ ಅಮಾನಿ,ಪಿಂಚಣಿ ಉಪಾಧ್ಯಕ್ಷರಾಗಿ ಅಬ್ದುಲ್ ಹಕೀಂ ಸಅದಿ,ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಅದಿ,ಜಿಲ್ಲಾ ಕೌನ್ಸಿಲರ್ ಗಳಾಗಿ ಶಂಸುದ್ದೀನ್ ಅಮ್ಜದಿ, ಹನೀಫ್ ಸಖಾಫಿ,ಅಬ್ದುಲ್ಲಾ ಖಾಸಿಮಿಯವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಯೂಸುಫ್ ಸಖಾಫಿ ಪ್ರಾರ್ಥಿಸಿ, ಶಂಸುದ್ದಿನ್ ಅಮ್ಜದಿ ಸ್ವಾಗತಿಸಿ,ಉನೈಸ್ ಸುಲ್ತಾನಿ ಸರ್ವರನ್ನು ವಂದಿಸಿದರು.