ಕಡಂಗ: ಮುಹ್ ಯಿದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿ ವಾರ್ಷಿಕ ಮಹಾ ಸಭೆ: ಹಾಲಿ ಆಡಳಿತ ಮಂಡಳಿ ಪುನರಾಯ್ಕೆ

ಕಡಂಗ: ಮುಹ್ ಯಿದ್ದೀನ್  ಜುಮಾ ಮಸೀದಿ ಆಡಳಿತ ಮಂಡಳಿ ವಾರ್ಷಿಕ ಮಹಾ ಸಭೆ:  ಹಾಲಿ ಆಡಳಿತ ಮಂಡಳಿ ಪುನರಾಯ್ಕೆ
ನೂತನ ಆಡಳಿತ ಮಂಡಳಿ...

ಕಡಂಗ: ಇಲ್ಲಿನ ಮುಹ್ ಯಿದ್ದೀನ್, ಜುಮಾ ಮಸೀದಿಯ ಜಮಾಅತ್ ಕಮಿಟಿಯ ವಾರ್ಷಿಕ ಮಹಾ ಸಭೆಯು ಮನ್ಶಹುಲ್ ಉಲೂಮ್ ಮದ್ರಸ ಸಭಾಂಗಣದಲ್ಲಿ ಭಾನವಾರ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಎಂ ಬಶೀರ್ ಹಾಜಿ ವಹಿಸಿದ್ದರು.ಸ್ಥಳೀಯ ಖತೀಬ್ ರಫೀಕ್ ಲತೀಫಿ ದುಆ ನೆರವೇರಿಸಿದರು.ಕಳೆದ 3 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು.

ತದನಂತರ ಸದಸ್ಯರ ಹಾಗೂ ಅಧ್ಯಕ್ಷರ ಅನುಮತಿ ಮೇರೆಗೆ ಪ್ರಸ್ತುತ ಆಡಳಿತ ಮಂಡಳಿಯನ್ನೇ ಮುಂದುವರಿಸಲು ತೀರ್ಮಾನಿಸಿದರು.ಅಧ್ಯಕ್ಷರಾಗಿ ಅಬ್ದುಲ್ಲಾ , ಉಪಾಧ್ಯಕ್ಷರಾಗಿ ಸಲಾಂ ಸಿ.ಎ, ಕಾರ್ಯದರ್ಶಿಯಾಗಿ ಅಬ್ದುಲ್ ರೆಹಮಾನ್ (ರಾಯಲ್), ಸದಸ್ಯರಾಗಿ ಅಂದಾಯಿ, ರಝಾಕ್, ಶಿಯಾಬ್,ಹಾರಿಸ್, ಅದ್ರಾಯಿ,ಸಿದ್ದೀಕ್, ಶಮೀರ್, ಇಸ್ಹಾಕ್ ಪುನರಾಯ್ಕೆಗೊಂಡರು‌.