ಕಡಂಗ ವಾಲಿಬಾಲ್ ಪ್ರೀಮಿಯರ್ ಲೀಗ್: ಆಟಗಾರರ ಬಿಡ್ಡಿಂಗ್ ;ಏಳು ತಂಡಗಳ ನಡುವೆ ನಡೆಯಲಿದೆ ಪ್ರಶಸ್ತಿಗಾಗಿ ಪೈಪೋಟಿ

ಕಡಂಗ: ಕಡಂಗ ವಾಲಿಬಾಲ್ ಪ್ರೀಮಿಯರ್ ಲೀಗ್ 5ನೇ ಆವೃತ್ತಿಯ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಕಡಂಗದ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಭಯ್ ವಹಿಸಿದ್ದರು.ಕ್ರೀಡಾಕೂಟವು ಶನಿವಾರ ಕಡಂಗ ವಿಜಯ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ನಡೆಯಲಿದೆ.
ಬಲಿಷ್ಠ ಏಳು ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಕ್ರೀಡಾಕೂಟದಲ್ಲಿ ಜಿಯಾನ್ ಫ್ರೆಂಡ್ಸ್, ಸೀಜಾನ್ ಫ್ರೆಂಡ್ಸ್, ಕೊಡಗು ರಾಯಲ್, ಗಲ್ಲಿ ಬಾಯ್ಸ್, ಅನ್ಸ್ಯಾರಿ,ಕೊಚೇರಿ, ಮತ್ತು ಕೊಡಗು ರಾಯಲ್ ಕಾಫಿ ತಂಡವು ಪಾಲ್ಗೊಳ್ಳಲಿದೆ.ಬಿಡ್ಡಿಂಗ್ ನಲ್ಲಿ ಅತೀ ಹೆಚ್ಚು ಪಾಯಿಂಟ್ ಗೆ ಕೊಡಗು ರಾಯಲ್ ತಂಡದ ರಾಜಿಕ್ ಬಿಡ್ಡ್ ಆಗಿದ್ದಾರೆ.ಕಾರ್ಯಕ್ರಮದ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ಬೀರ್ ಸಿಇ,ಕರಿಮ್ ಲಿಮ್ರಾ, ಅಬೂಬಕರ್, ರಾಶೀದ್, ಸಿದ್ದಿಕ್, ಮುಸ್ತಾಫಾ, ಸೌಕತ್, ಕರೀಂ, ಸಾಬೀರ್, ಶಾನಿದ್, ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ನೌಫಲ್ ಎಂಬಿ ನಿರ್ವಹಿಸಿದರು.
ವರದಿ: ನೌಫಲ್