ಕನಸುಗಳ ರೆಕ್ಕೆಗಳನ್ನು ಕತ್ತರಿಸಿದ ವಿಮಾನ ದುರಂತ:ಅನೂಪ್ ಕುಮಾರ್ ಸಂತಾಪ

ಕನಸುಗಳ ರೆಕ್ಕೆಗಳನ್ನು ಕತ್ತರಿಸಿದ ವಿಮಾನ ದುರಂತ:ಅನೂಪ್ ಕುಮಾರ್ ಸಂತಾಪ

ಮಡಿಕೇರಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಉಂಟಾದ ವಿಮಾನ ಅಪಘಾತದ ಸುದ್ದಿ ಎಲ್ಲರಲ್ಲೂ ಆತಂಕ ಉಂಟು ಮಾಡಿದೆ. ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವಿಗೀಡಾದ 240 ಕ್ಕೂ ಅಧಿಕ ಮಂದಿಯ ಕುಟುಂಬಸ್ಥರ ದುಖಃವನ್ನು ಭರಿಸುವ ಶಕ್ತಿ ದೇವರು ನೀಡಲಿ.ಇಂತಹ ಘಟನೆಗಳು ಎಲ್ಲಿಯೂ ಮುಂದಿನ ದಿನಗಳಲ್ಲಿ ನಡೆಯದಿರಲಿ.ವಿಮಾನ ಪತನದಲ್ಲಿ ಡಾಕ್ಟರ್ ಕನಸು ಕಂಡಿರುವ 20 ಅಧಿಕ ವಿದ್ಯಾರ್ಥಿಗಳು ಸಾವಿಗೀಡಾಗಿದ್ದು ನೋವು ತಂದಿದೆ.

ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸುಂಟ್ಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅನೂಪ್ ಕುಮಾರ್ ಸುಂಟ್ಟಿಕೊಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.