ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ: ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಗರ್ಭಿಣಿಯರಿಗೆ ಹಣ್ಣು ಹಂಪಲು ವಿತರಣೆ
ಮಡಿಕೇರಿ:ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆ ಮಡಿಕೇರಿಯ ಜಿಲ್ಲಾಆಸ್ಪತ್ರೆಗೆ ಭೇಟಿ ನೀಡಿದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಶೇಕ್ ರಿಜ್ವಾನ್ ಮತ್ತು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಂಜು ಚೆಟ್ಟಿ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ನೇತೃದ್ವದಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಗರ್ಭಿಣಿ ಮಹಿಳೆಯರ ಆರೋಗ್ಯ ವಿಚಾರಿಸಿ ಮಾಡಿ ಹಣ್ಣುಹಂಪಲು ವಿತರಣೆ ಮಾಡುವುದರ ಮೂಲಕ ಪಂಚ ಗ್ಯಾರಂಟಿ ಕಾಂಗ್ರೆಸ್ ಸರಕಾರದ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭ ಕೆಪಿ ಸಿ ಸಿ ವಕ್ತಾರ ಆನಂದ ಕುಮಾರ್ ಬೆಂಗಳೂರು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ,ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ, ರಾಹುಲ್ ಮಾರ್ಷಲ್, ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಕೀಮ್ ,ಮಡಿಕೇರಿ ಯುವ ಕಾಂಗ್ರೆಸ್ ವಿಧಾನಸಭಾ ಅಧ್ಯಕ್ಷ ಅನೂಪ್ ಕುಮಾರ್,ವಿರಾಜಪೇಟೆ ಯುವ ಕಾಂಗ್ರೆಸ್ ವಿಧಾನ ಸಭಾ ಅಧ್ಯಕ್ಷ ರಕ್ಷಿತ್ ಚಂಗಪ್ಪ,ಸೋಮವಾರಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್,ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೋಳಿ,ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದ್ಯಾನ್ ದೇವಯ್ಯ, ವಿರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಬೀರ್, ಉಪಾಧ್ಯಕ್ಷ ಶಕೀಲ್,ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರ್ಜುನ್ ಮತ್ತು ಅನ್ಫಾಲ್ ಮುತ್ತಣ್ಣ, ಸೋಮಣ್ಣ ಹಾಜರಿದ್ದರು
