ಕುಶಾಲನಗರ: ಶಿಹಾಬ್ ತಂಙಲ್ ಸೆಂಟರ್ ಫಾರ್ ಹ್ಯುಮಾನಿಟಿ ಹೋಂ ಕೇರ್ ಉದ್ಘಾಟನೆ : ಬಡ ರೋಗಿಗಳಿಗೆ ನೆರಳಾಗಿರುವ ಹೋಂ ಕೇರ್ ಸೆಂಟರ್
ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಸಾವಿರಾರು ಬಡ ರೋಗಿಗಳ ಆಶಾಕಿರಣವಾಗಿರುವ ಶಿಹಾಬ್ ತಂಙಲ್ ಸೆಂಟರ್ ಫಾರ್ ಹ್ಯುಮಾನಿಟಿ ಹೋಂ ಕೇರ್ ಎಂಬ ಸಂಸ್ಥೆಯ ಮೊದಲ ಸೆಂಟರ್ ವಿರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಹಲವಾರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ.ಇದೀಗ ಹೊಸ ಸೆಂಟರ್ ಕುಶಾಲನಗರದಲ್ಲಿ ಪ್ರಾರಂಭಗೊಂಡಿದೆ. ಕುಶಾಲನಗರ ಮತ್ತು ಮಡಿಕೇರಿಯ ಸುತ್ತಮುತ್ತಲಿನಲ್ಲಿರುವ ರೋಗಿಗಳಿಗೆ ನೆರವಾಗುಲು ಹಾಗೂ ವಾರದಲ್ಲಿ ಮೂರು ದಿನ ಮಡಿಕೇರಿ ಮತ್ತು ಮೂರು ದಿನ ಕುಶಾಲನಗರದಲ್ಲಿ ರೋಗಿಗಳ ಮನೆಗೆ ತೆರಳಿ ಅವರಿಗೆ ಬೇಕಾಗುವ ಚಿಕಿತ್ಸೆಯನ್ನು ನೀಡಲು ನೂತನ ಸೆಂಟರ್ ಉದ್ಘಾಟನೆಯನ್ನು ಪಾಣಕ್ಕಾಡ್ ಸಯ್ಯದ್ ರಶೀದ್ ಅಲಿ ತಂಙಳ್ ಕುಶಾಲನಗರದಲ್ಲಿ ನೆರವೇರಿಸಿದರು.ನೂತನ ಸೆಂಟರ್ ಉದ್ಘಾಟನಾ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಕೆ.ಎಂ.ಸಿ.ಸಿ.ಯ ಅಧ್ಯಕ್ಷರಾದ ಎನ್.ಕೆ ನೌಷಾದ್, ಶಿಹಾಬ್ ತಂಙಲ್ ಸೆಂಟರ್ ಫಾರ್ ಹ್ಯುಮಾನಿಟಿ ಹೋಂ ಕೇರ್ ನಿರ್ದೇಶಕರಾದ ಡಾಕ್ಟರ್ ಎಂ.ಎ ಅಮೀರ್ ಅಲಿ, ಶಾಫಿ ಫೈಜಿ, ಅಬ್ದುಲ್ ಮಜೀದ್ , ಟಿ ಉಸ್ಮಾನ್, ಡಾ. ಕರಂಬಯ್ಯ, ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ವಿ.ಪಿ ಶಶಿಧರ್,ಪುರಸಭಾ ಸದಸ್ಯ ಕಲೀಮುಲ್ಲಾ, ಹುಸೈನ್ ಎಂ.ಎ,ಎಂಎಸ್ ಸೈಫುದ್ದೀನ್,ಅಬ್ದುಲ್ಲಾ ಕ ಗಫೂರ್ ,ಮಹಮೂದ್ ಬಶೀರ್ ಹಾಜಿ, ಸಾಜಿರ್, ಜಾಬಿರ್, ಸಲಾಂ ತಂಙಲ್, ರಯೀಸ್, ರಶೀದ್, ನಾಸಿರ್ ಹಾಗೂ ಕುಶಾಲನಗರ ಮತ್ತು ಮಡಿಕೇರಿ ಸಮೀತಿ ಪದಾಧಿಕಾರಿಗಳು ಇದ್ದರು.