ಕೂಡಿಗೆ:ಮೇ‌ 27ರಂದು ಹೆಗ್ಗಡಳ್ಳಿಯ ಶನೈಶ್ವರ ಸ್ವಾಮಿ ರಥೋತ್ಸವ

ಕೂಡಿಗೆ:ಮೇ‌ 27ರಂದು  ಹೆಗ್ಗಡಳ್ಳಿಯ ಶನೈಶ್ವರ ಸ್ವಾಮಿ ರಥೋತ್ಸವ

ಕೂಡಿಗೆ:ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಶ್ರೀ ಶನೈಶ್ವರ ಸ್ವಾಮಿ ಜಯಂತಿ ಹಾಗೂ ಶನೈಶ್ವರ ಸ್ವಾಮಿಯ ರಥೋತ್ಸವವು ವಿಜ್ರಂಭಣೆಯಿಂದ ಮೇ 27ರ ಮಂಗಳವಾರ ಕೂಡಿಗೆ ಸಮೀಪದ ಹೆಗ್ಗಡಹಳ್ಳಿ ಗ್ರಾಮದ ಶ್ರೀ ಶನೈಶ್ವರ ದೇವಾಲಯದ ಅವರಣದಲ್ಲಿ ನಡೆಯಲಿದೆ.ಮಂಗಳವಾರ ಬೆಳಿಗ್ಗೆಯಿಂದಲೇ ದೇವಾಲಯ ಆವರಣದಲ್ಲಿ ಪಂಚಗವ್ಯ,ಪುಣ್ಯಹ,ವಾಚನ,ಗಣಯಾನ, ನವ ಕಲಶಆರಾಧನೆ,‌ಪ್ರಧಾನ, ಹೋಮ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ,ಪೂರ್ಣಹುತಿ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ. ಹಾಗೂ ವಿಜೃಂಭಣೆಯಿಂದ ಸ್ವಾಮಿಯ ರಥೋತ್ಸವದ ಜಳಕ ವೈಭವದ ಮೆರವಣಿಗೆ ರಂಗ ಪೂಜೆ ನಡೆಯಲಿದೆ. ಮಂಗಳವಾರ ಸಂಜೆ 4 ಗಂಟೆಗೆ ಅಲಂಕೃತ ಭವ್ಯ ರಥದಲ್ಲಿ ನದಿಯಲ್ಲಿ ಝಳಕದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದೇಗುಲದ ಸ್ವಸ್ಥಳ ಸೇರಲಾಗುತ್ತದೆ. ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಹಾಗೂ ಪ್ರಸಾದ ವಿನಿಯೋಗ ಹಾಗೂ ಮಹಾಮಂಗಳಾರತಿ ನಡೆಯಲಿದೆ.  ದಿವಂಗತ ಶ್ರೀಮತಿ ಎಲ್ಲೂಬಾಯಿ ಅಮ್ಮನವರ ಆಶೀರ್ವಾದಗಳೊಂದಿಗೆ ಧಾರ್ಮಿಕ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುವುದರಿಂದ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶಿವಕೃರಾದ ಶ್ರೀಮತಿ ಎಲ್ಲೂಬಾಯಿ ಅಮ್ಮನವರ ಕುಟುಂಬಸ್ಥರು ಮತ್ತು ಭಕ್ತವೃಂದ ಶ್ರೀ ಶನೈಶ್ವರ ದೇವಾಲಯ ಹೆಗ್ಗಡಳ್ಳಿ ಕೂಡಿಗೆ ಮನವಿ ಮಾಡಿದ್ದಾರೆ.