ಕೊಡಗು ಜಿಲ್ಲೆಯ ಸೌಹಾರ್ದ ಸಹಕಾರಿಗಳ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ

ಕೊಡಗು ಜಿಲ್ಲೆಯ ಸೌಹಾರ್ದ ಸಹಕಾರಿಗಳ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ

ಮಡಿಕೇರಿ:ಕೊಡಗು ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗಾಗಿ ಕ್ಲಸ್ಟರ್‌ ಮಟ್ಟದ ತರಬೇತಿಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಮೈಸೂರು ಹಾಗೂ ಮೈಸೂರು ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ. ಇವರ ಸಹಕಾರದೊಂದಿಗೆ ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ ನಲ್ಲಿ ನಡೆಯಿತು.

 ತರಬೇತಿಯ ಉದ್ಘಾಟನೆಯನ್ನು ಕೊಡವ ಎಂಟರ್‌ಪ್ರೆನ್ಯೂರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ. ನ ಉಪಾಧ್ಯಕ್ಷ ರಾಮಪ್ಪ ಎಂ ಎ ನೆರವೇರಿಸಿದರು. ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿಯಮಿತದ ಅಧ್ಯಕ್ಷ ಎಸ್.ಆರ್. ನಾರಾಯಣ ರಾವ್‌ ಅಧ್ಯಕ್ಷತೆಯನ್ನು ವಹಿಸಿದ್ದರು.   

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಪ್ರಾಂತೀಯ ಧಿಕಾರಿ ಗುರುಪ್ರಸಾದ್ ಬಂಗೇರ, ಕಾರ್ಯಕ್ರಮದ ಸ್ವಾಗತವನ್ನು ಸೌಹಾರ್ದ ಅಭಿವೃದ್ಧಿ ಅಧಿಕಾರಿ ಸುರೇಶ ಆರ್ ಎಸ್ ಹಾಗೂ ವಂದನಾರ್ಪಣೆಯನ್ನು ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ.ಇದರ ಮುಖ್ಯಕಾರ್ಯನಿರ್ವಾಹಕ ಎಸ್‌. ಸಿ ಭಗೀರಥ ನೆರವೇರಿಸಿದರು.

ಕಾರ್ಯಕ್ರಮದ ಮೊದಲನೆಯ ಅವಧಿಯನ್ನು ಶೇಖರ್‌ ಪಿ, ಸಾಲದ ಕಡತಗಳ ನಿರ್ವಹಣೆ ಹಾಗೂ ಸಾಲ ವಸೂಲಾತಿ ವಿಷಯದ ಕುರಿತು ಹಾಗೂ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಆಡಳಿತ ಮಂಡಳಿ ಹಾಗೂ ಸಾಮಾನ್ಯ ಸಭೆ ನಡೆಸುವ ವಿಧಾನಗಳು ಕುರಿತು ಉಪನ್ಯಾಸ ನೀಡಿದರು. ಸದರಿ ಕ್ಲಸ್ಟರ್ ಮಟ್ಟದ ತರಬೇತಿಯಲ್ಲಿ ಒಟ್ಟು 14 ಸೌಹಾರ್ದ ಸಹಕಾರಿಗಳಿಂದ 22 ಜನ ಪ್ರತಿನಿಧಿಗಳು ಭಾಗವಹಿಸಿದ್ದರು.