ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ:ಸೋಮವಾರಪೇಟೆ ತಾಲ್ಲೂಕಿನ ಹತ್ತು ಕ್ಲಸ್ಟರ್ ಗಳಿಗೆ ರಜೆ ಘೋಷಣೆ

ಸೋಮವಾರಪೇಟೆ:ತಾಲೂಕಿನ 10 ಕ್ಲಸ್ಟರ್ ಗಳಿಗೆ ನಾಳೆ ದಿನಾಂಕ 25/6/2025 ರಂದು ಅತಿಯಾದ ಮಳೆಯ ಕಾರಣದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಯನ್ನು ನೀಡಲಾಗಿರುತ್ತದೆ.ಕುಶಾಲನಗರ ತಾಲೂಕು ವ್ಯಾಪ್ತಿಯ ಕುಶಾಲನಗರ ಹೆಬ್ಬಾಲೆ ಕೂಡಿಗೆ ನಂಜರಾಯಪಟ್ಟಣ ಮತ್ತು ಶುಂಠಿಕೊಪ್ಪ ಕ್ಲಸ್ಟರ್ ಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಾಳೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ರಜೆ ಇರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ತಿಳಿಸಿದ್ದಾರೆ.