ಕೊಡಗು ಮುಸ್ಲಿಂ ಕಪ್ ಫುಟ್ಬಾಲ್: ಅಮಿಟಿ ಎಫ್.ಸಿ ಗದ್ದೆಹಳ್ಳ ಸೆಮಿಫೈನಲ್ ಗೆ ಲಗ್ಗೆ
ಮಡಿಕೇರಿ: ಕೊಡಗು ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯವಾಳಿಯ ಮೊದಲ ಕ್ವಾಟರ್ ಫೈನಲ್ ಪಂದ್ಯದಲ್ಲಿ ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡವು 3-2 ಗೋಲುಗಳ ಅಂತರದಿಂದ ಸ್ಟಾರ್ಸ್ ಗೋಣಿಕೊಪ್ಪ ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.ಅಮಿಟಿ ಎಫ್.ಸಿ ತಂಡದ ಪರವಾಗಿ ಮಶೂದ್ ಎರಡು ಹಾಗೂ ಸಾದಿಕ್ ಒಂದು ಗೋಲುಗಳಿಸಿದರು.ಗೋಣಿಕೊಪ್ಪ ತಂಡದ ಪರವಾಗಿ ಸುಹೈಲ್ ಹಾಗೂ ಕಾಕು ತಲಾ ಒಂದು ಗೋಲು ದಾಖಲಿಸಿದರು.ಅಮಿಟಿ ಎಫ್.ಸಿ ತಂಡದ ಗೋಲ್ ಕೀಪ್ ಹಫೀಜ್ ಮ್ಯಾನ್ ಆಫ್-ದಿ-ಮ್ಯಾಚ್ ಪ್ರಶಸ್ತಿ ಪಡೆದರು