ಕೊಡವ ಕುಟುಂಬಗಳ ನಡುವಿನ ತೋಕ್ ನಮ್ಮೆ: ಲೋಗೋ ಬಿಡುಗಡೆಗೊಳಿಸಿದ ಎಎಸ್ ಪೊನ್ನಣ್ಣ

ಬೆಂಗಳೂರು:ಜೂನ್ 7 ಹಾಗೂ 8 ರಂದು, ಜೂನಿಯರ್ ಕಾಲೇಜ್ ಮೈದಾನ ಪೊನ್ನಂಪೇಟೆಯಲ್ಲಿ, ಪೆಮ್ಮಂಡ ವಕ್ಕ ತೂಚಮಕೇರಿ ಇವರ ವತಿಯಿಂದ ಆಯೋಜಿಸಿರುವ, ಕೊಡವ ಕುಟುಂಬಗಳ ನಡುವಿನ ತೋಕ್ ನಮ್ಮೆ 2025, ಗುಂಡು ಹೊಡೆಯುವ ಸ್ಪರ್ಧೆಯ ಲಾಂಛನವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಬಿಡುಗಡೆ ಮಾಡಿದರು.
ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಂತರ್ ಕುಟುಂಬದ ಈ ಸ್ಪರ್ಧಾ ಕೂಟದ ಲಾಂಛನ ಬಿಡುಗಡೆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಹಾಗೂ ಸ್ಪರ್ಧಾ ಆಯೋಜಕರು ಉಪಸ್ಥಿತರಿದ್ದರು. ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಶಾಸಕರು ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ.