ಕೊಡ್ಲಿಪೇಟೆ:ರಸ್ತೆ ಕಾಮಗಾರಿ ವೀಕ್ಷಿಸಿದ ಡಾ ಮಂತರ್ ಗೌಡ

ಕೊಡ್ಲಿಪೇಟೆ:ರಸ್ತೆ ಕಾಮಗಾರಿ ವೀಕ್ಷಿಸಿದ ಡಾ ಮಂತರ್ ಗೌಡ

ಕೊಡ್ಲಿಪೇಟೆ: ಕೊಡ್ಲಿಪೇಟೆ ಕ್ಯಾತೆ ,ಯಸಳೂರು ಮೂಲಕ ದುಂಡಳ್ಳಿ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ಶಾಸಕ ಡಾ.ಮಂಥರ್ ಗೌಡ ವೀಕ್ಷಿಸಿದರು.ಸಂಪೂರ್ಣ ಹದಗೆಟ್ಟು ಹಲವು ವರ್ಷದಿಂದ ಡಾಂಬರೀಕರಣ ಕಾಣದೆ ಸಾರ್ವಜನಿಕ ಸಂಚಾರಕ್ಕೆ ಅನಾನುಕೂಲವಾಗಿದ್ದ ಈ ರಸ್ತೆಯಿಂದ ಜನ ಬೇಸತ್ತಿದ್ದರು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯು 9 ಕೋಟಿ 85 ಲಕ್ಷ ವೆಚ್ಚದಲ್ಲಿ ಈ ರಸ್ತೆಯನ್ನು ಅಗಲೀಕರಣ ಮಾಡಿ ಡಾಂಬರೀಕರಣ ಕೆಲಸ ಮಾಡಲಾಗಿತ್ತು.

ಕೊಡ್ಲಿಪೇಟೆ ಸಮೀಪದ ಕಡೇಪೇಟೆ ಜಂಕ್ಷನ್ ನಿಂದ ಕ್ಯಾತೆ ಗ್ರಾಮದವರೆಗೆ ರಸ್ತೆಯನ್ನು ವೀಕ್ಷಣೆ ಮಾಡಿದ ಶಾಸಕರಾದ ಡಾ ಮಂತರ್ ಗೌಡ ಅವರ ಬಳಿ,ಸ್ಥಳೀಯರು ರಸ್ತೆ ಬದಿ ಮಣ್ಣು ಹಾಕುವುದು ಹಾಗೂ ವಾಹನ ಸಂಚಾರಿ ಸೂಚಕ ಫಲಕ, ಬಿಳಿಗೆರೆ ಸೇರಿದಂತೆ ಕೆಲಸ ಬಾಕಿ ಇರುವುದನ್ನು ಗಮನಕ್ಕೆ ತಂದರು.ಉಳಿದ ಕಾಮಗಾರಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಮತೆ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿದರು‌.ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.