ಗೌಡ ಫುಟ್ಬಾಲ್ ಕಪ್:ಕಡ್ಯದ ತಂಡ ಚಾಂಪಿಯನ್ : ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ಮಞಂಡ್ರ ತಂಡ
ಮಡಿಕೇರಿ:ಗೌಡ ಫುಟ್ಬಾಲ್ ಅಕಾಡಮಿ (ರಿ) ಕೊಡಗು ಇವರ ವತಿಯಿಂದ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಕಪ್ ಪಂದ್ಯಾವಳಿಯ ಚಾಂಪಿಯನ್ ತಡವಾಗಿ ಕಡ್ಯದ ತಂಡ ಹೊರಹೊಮ್ಮಿದೆ.ರನ್ನರ್ಸ್ ಪ್ರಶಸ್ತಿಗೆ ಮಞಂಡ್ರ ತಂಡ ತೃಪ್ತಿಪಟ್ಟುಕೊಂಡಿದೆ.ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಕಡ್ಯದ ತಂಡ ವೈಶಾಕ್ ಎರಡು ಗೋಲು ದಾಖಲಿಸಿದರು.ಮಞಂಡ್ರ ತಂಡದ ಪರವಾಗಿ ದಿಲನ್ ಒಂದು ಗೋಲು ಮಾತ್ರ ದಾಖಲಿಸಲು ಶಕ್ತರಾದರು.ಮಞಂಡ್ರ ತಂಡವು ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು ಕೂಡ ಗೋಲುಗಳಿಸಲು ಸಾಧ್ಯವಾಗಿಲ್ಲ.ಅಂತಿಮವಾಗಿ ಕಡ್ಯದ ತಂಡವು 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಕಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಆಕರ್ಷಕ ಟ್ರೋಫಿಯೊಂದಿಗೆ ಒಂದು ಲಕ್ಷ ರೂ ನಗದು ಹಾಗೂ ಆಕರ್ಷ ಟ್ರೋಫಿ ಪಡೆದುಕೊಂಡರು.ಐಯ್ಯಂಡ್ರ ಹಾಗೂ ಪೊಕ್ಕಳಂಡ್ರ ತಂಡವು ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದರು.
ಎಂಟನೇ ವರ್ಷದ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಮಞಂಡ್ರ ತಂಡದ ಸ್ಟಾರ್ ಆಟಗಾರ ಲೋಹಿತ್ ಪಡೆದುಕೊಂಡರು.ಅತ್ಯುತ್ತಮ ಗೋಲ್ ಕೀಪರ್ ಐಯ್ಯಂಡ್ರ ಮೋನಿಷ್,ಬೆಸ್ಟ್ ಡಿಫೆಂಡರ್ ಕಡ್ಯದ ದರ್ಶನ್,ಉದಯೋನ್ಮುಖ ಆಟಗಾರ ಪೊಕ್ಕುಳಂಡ್ರ ತನು ಹಾಗೂ ಅತ್ಯುತ್ತಮ ತಂಡದ ಪ್ರಶಸ್ತಿಯನ್ನು ಚಂಡೀರ ತಂಡ ಪಡೆದುಕೊಂಡಿತು.