ಗೌಡ ಫುಟ್ಬಾಲ್ ಕಪ್:ಕಡ್ಯದ ತಂಡ ಫೈನಲ್ ಗೆ ಲಗ್ಗೆ

ಗೌಡ ಫುಟ್ಬಾಲ್ ಕಪ್:ಕಡ್ಯದ ತಂಡ ಫೈನಲ್ ಗೆ ಲಗ್ಗೆ

ಮಡಿಕೇರಿ:ಗೌಡ ಫುಟ್ಬಾಲ್ ಅಕಾಡಮಿ (ರಿ) ಕೊಡಗು ಇವರ ವತಿಯಿಂದ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಕಪ್ ಪಂದ್ಯಾವಳಿಯ ಮೊದಲನೇ ಸೆಮಿಫೈನಲ್ ಪಂದ್ಯವು ಐಯ್ಯಂಡ್ರ ಹಾಗೂ ಕಡ್ಯದ ತಂಡಗಳ ನಡುವೆ ನಡೆಯಿತು.ಐಯ್ಯಂಡ್ರ ತಂಡದ ಪರ ರೋಹನ್ 1 ಗೋಲ್ ಬಾರಿಸಿದರು.ಕಡ್ಯದ ತಂಡದ ಪರ ಕಾರ್ತಿಕ್ 1 ಗೋಲ್ ಬಾರಿಸಿದರು.ಎರಡು ತಂಡಗಳು ತಲಾ ಒಂದು ಗೋಲು ದಾಖಲಿಸಿ ಹೊಡೆದು ಸಮಬಲ ಸಾಧಿಸಿತು.ಅಂತಿಮವಾಗಿ ಟ್ರೈ ಬ್ರೇಕರ್ ನಲ್ಲಿ 4 - 2 ಗೋಲ್ ಗಳಿಂದ ಕಡ್ಯದ ತಂಡ ಗೆದ್ದು ಫೈನಲ್ ಹಂತಕ್ಕೆ ಪ್ರವೇಶಿಸಿದೆ.