ಚೆನ್ನಯ್ಯನಕೋಟೆ: ಯೋಧನಿಗೆ ಅದ್ದೂರಿ ಸ್ವಾಗತ

ಸಿದ್ದಾಪುರ: ಭಾರತೀಯ ಸೇನೆಯಲ್ಲಿ ಸತತ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ಅದ್ದೂರಿಯಾಗಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ವಿರಾಜಪೇಟೆ ತಾಲೂಕಿನ ಚೆನ್ನಯ್ಯಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೂರು ಗ್ರಾಮದ ಯೋಧ ನವೀನ್ ಪೊನ್ನಪ್ಪ ಹೊಸೋಕ್ಲು ಹಾಗೂ ಅವರ ಧರ್ಮಪತ್ನಿ ಚೈತ್ರ ಅವರನ್ನು ಗ್ರಾಮದ ನಾಗ ದೇವಸ್ಥಾನದಿಂದ ಆರತಿ ಎತ್ತಿ ಹೂಹಾರ ಹಾಕಿ ಹೂಸುರಿಸಿ, ಶಾಲು ಹೋದಿಸಿ ಸನ್ಮಾನಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಮುತ್ತಪ್ಪ ಚಂಡೆ ಕಲಾವಿದ ತಂಡದವರಿಂದ ಚಂಡೆ ಪ್ರದರ್ಶನ ಹಾಗೂ ವಾದ್ಯ ಮೆರವಣಿಗೆ ಮೂಲಕ ಪಟಾಕಿ ಸಿಡಿಸಿ ಜಯಘೋಷಗಳೊಂದಿಗೆ ಯೋಧನ್ನು ಗ್ರಾಮಸ್ಥರು ಮನೆಗೆ ಕರೆ ತರಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಪದ್ಮೇಶ, ಜಗ, ಮರಿ, ಚಿಪ್ಪಣ, ಚಿತ್ರು, ವಿಶು, ಹಾಗೂ ಮಹಿಳೆಯರು ಮಕ್ಕಳು ಹಾಜರಿದ್ದರು.