ಚೆಯ್ಯಂಡಾಣೆ ಚೇಲಾವರದಲ್ಲಿ ಬೃಹತ್ ಗಾತ್ರದ ಮರ ಬಿದ್ದು ದೇವಸ್ಥಾನಕ್ಕೆ ಹಾನಿ

ಚೆಯ್ಯಂಡಾಣೆ ಚೇಲಾವರದಲ್ಲಿ ಬೃಹತ್ ಗಾತ್ರದ ಮರ ಬಿದ್ದು ದೇವಸ್ಥಾನಕ್ಕೆ ಹಾನಿ
ಚೆಯ್ಯಂಡಾಣೆ ಚೇಲಾವರದಲ್ಲಿ ಬೃಹತ್ ಗಾತ್ರದ ಮರ ಬಿದ್ದು ದೇವಸ್ಥಾನಕ್ಕೆ ಹಾನಿ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದ ಚೋಲಿ ಶ್ರೀ ಭಗವತಿ ದೇವಸ್ಥಾನದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಚೋಲಿ ಶ್ರೀ ಭಗವತಿ ದೇವಸ್ಥಾನ ಸಮೀಪವಿರುವ ತೋಟದಿಂದ ಈ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಬಾರಿ ಗಾಳಿ,ಮಳೆಗೆ ಬೃಹತ್ ಗಾತ್ರದ ಸಿಲ್ವರ್ ಮರ ಬಿದ್ದ ಪರಿಣಾಮ ದೇವಸ್ಥಾನದ ಮೇಲ್ಚಾವಣಿಗೆ ಅಳವಡಿಸಲಾದ ಹೆಂಚುಗಳು ಹಾನಿಯಾಗಿದ್ದು ನಷ್ಟ ಸಂಭವಿಸಿದೆ.