ಜಮ್ಮು ಕಾಶ್ಮೀರದ ಪೆಹಲ್ಗಾಮ್ ಘಟನೆ ಖಂಡಿಸಿದ ವಿರಾಜಪೇಟೆ ನಗರ ಬಿಜೆಪಿ ಒ.ಬಿ.ಸಿ ಘಟಕ:
ವಿರಾಜಪೇಟೆ:ಕಾಶ್ಮೀರ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ಆಕ್ರಮಣದಿಂದ ಸಾವಿಗೀಡಾದ ಘಟನೆಯನ್ನು ಬಗ್ಗೆ ವಿರಾಜಪೇಟೆ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನದ ವಿರುದ್ದ ಮತ್ತು ಉಗ್ರರ ಧಮನಕ್ಕೆ ಸರ್ಕಾರವು ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಜನತಾ ಪಕ್ಷ ಒ.ಬಿ.ಸಿ ಘಟಕ ವಿರಾಜಪೇಟ ನಗರ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಪೆಹಲ್ಗಾಮ್ ನಲ್ಲಿ ನಡೆದಿರುವ ಉಗ್ರರ ದಾಳಿ ಪ್ರಕರಣದ, ಕುರಿತು ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಒ.ಬಿ.ಸಿ ಘಟಕದ ಅಧ್ಯಕ್ಷ ಟಿ.ಸಿ.ಸುರೇಶ್ , ಕಾಶ್ಮೀರದ ಪೆಹಲ್‌ಗಾಂ ನಲ್ಲಿ ನಡೆದಿರುವ ನರಮೇಧ ಘಟನೆಯನ್ನು ಓ.ಬಿ.ಸಿ ಘಟಕವು ತೀವ್ರವಾಗಿ ಖಂಡಿಸುತ್ತದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರವು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿತ್ತು. ಇದರಿಂದ ಉಗ್ರರ ದಾಳಿಯಿಂದ ತತ್ತರಿಸಿದ್ದ ಜಮ್ಮು ಕಾಶ್ಮೀರವು ಪ್ರಕೃತಿ ಸೌಂದರ್ಯ ಹಾಗೂ ಶಾಂತಿಯು ಮರು ಸ್ಥಾಪನೆಗೊಂಡು ಪ್ರವಾಸಿಗರು ಬರುವಂತಾಯಿತು. ಇದನ್ನು ಸಹಿಸದ ಪಾಪಿ ಪಾಕಿಸ್ತಾನವು ಇಂದು ಪ್ರತೀಕಾರದ ರೂಪದಲ್ಲಿ ಉಗ್ರರನ್ನು ಬಿಟ್ಟು ಪ್ರವಾಸಿಗರು ನೆಲೆಸಿದ್ದ ನೆಲೆಯ ಮೇಲೆ ಗುಂಡಿನ ಧಾಳಿ ನಡೆಸಿ ಅಮಾಯಕರನ್ನು ಬಲಿ ಪಡೆದಿದ್ದಾರೆ.ಉಗ್ರವಾದವನ್ನು ಯಾವ ದೇಶವು ಒಪ್ಪುವುದಿಲ್ಲ. ಆದರೇ ಪಾಕಿಸ್ತಾನದ ಕುತಂತ್ರ ಮತ್ತು ಉಗ್ರವಾದಿ ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಮಾನವೀಯ ಅಂಶಗಳನ್ನು ಧಮನ ಮಾಡಲು ಹೊರಟಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಉಗ್ರವಾದವನ್ನು ಬುಡ ಸಮೇತ ತೆಗೆದುಹಾಕುವ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ದೇಶದ ಭದ್ರತೆಯ ಹಿತದೃಷ್ಟಿಯಿಂದ ದಿಟ್ಟ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೆ ವಿರಾಜಪೇಟೆ ಭಾ.ಜ.ಪ ಓ.ಬಿ.ಸಿ ಘಟಕವು ಬೆಂಬಲ ಸೂಚಿಸುತ್ತದೆ ಎಂದು ಹೇಳಿದರು.
ವಿರಾಜಪೇಟೆ ನಗರದ ಮಂಡಲ ಪ್ರಮುಖರಾದ ಪಿ.ಜಿ. ಸುಮೇಶ್ ಮಾತನಾಡಿ, 2019 ರಲ್ಲಿ ಪುಲ್ವಾಮ ನಲ್ಲಿ ಸೈನಿಕರು (ಸಿ.ಆರ್.ಪಿ.ಎಫ್) ತುಕಡಿಗಳ ವಾಹನದ ಮೇಲೆ ದಾಳಿ ನಡೆಸಿ ಹಲವು ಮಂದಿ ಸೈನಿಕರು ಜೀವ ತೆತ್ತರು. ಇದೀಗ ಮತ್ತೊಮ್ಮೆ ಪ್ರವಾಸಿ ತಾಣದ ನೆಲೆಯ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಭಯೋತ್ಪಾದನೆಯನ್ನು ಬುಡಸಹಿತ ಕಿತ್ತೊಗೆಯಲು ಸಾಧ್ಯವಾಗದಿದ್ದರು ಕೂಡ, ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರವು ಭಯೋತ್ಸಾದನೆ ನಿಗ್ರಹಕ್ಕೆ ಮತ್ತು ಪರೋಕ್ಷವಾಗಿ ಬೆಂಬಲ ಸೂಚಿಸುವ ಸಂಘಟನೆಗಳ ಮೇಲೆ ನಿರ್ದಾಕ್ಷಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಭಾ.ಜ.ಪ ಓ.ಬಿ.ಸಿ ಘಟಕ ವಿರಾಜಪೇಟೆ ನಗರದ ಸಹ ಕಾರ್ಯದರ್ಶಿ ಶೊನೋಜ್, ವಿರಾಜಪೇಟೆ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಉನ್ನಿಕೃಷ್ಣನ್ ಹಾಜರಿದ್ದರು.