ಜೂನ್ 20ರವರೆಗೆ ಕಡಿದ ಮರದ ನಾಟಗಳನ್ನು ಸಾಗಿಸಲು ಅನುಮತಿ ನೀಡಿ: ಜಿಲ್ಲಾಧಿಕಾರಿ ಆದೇಶ

ಜೂನ್ 20ರವರೆಗೆ ಕಡಿದ ಮರದ ನಾಟಗಳನ್ನು ಸಾಗಿಸಲು ಅನುಮತಿ ನೀಡಿ: ಜಿಲ್ಲಾಧಿಕಾರಿ ಆದೇಶ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಜೂನ್ 06ರಿಂದ ಜುಲೈ 05ರವರೆಗೆ ಮರಳು,ಮರದ ದಿಮ್ಮಿಗಳ ಮತ್ತು ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿರುತ್ತದೆ.ಪ್ರಸ್ತುತ ಸದರಿ ಆದೇಶವನ್ನು ಭಾಗಶಃ ಮಾರ್ಪಡಿಸಿ ಈಗಾಗಲೇ ಕಡಿದ ಮರದ ನಾಟಾಗಳನ್ನು ಮಾತ್ರ ವಾಹನದ ಗರಿಷ್ಠ ನೋಂದಣಿ ತೂಕ 18,500 ಕೆ.ಜಿ ಮೀರದಂತೆ ಜೂನ್ 20ರವರೆಗೆ ಸಾಗಿಸಲು ಅನುಮಿತಿ ನೀಡಲಾಗಿದೆ.ಉಳಿದಂತೆ ಮೇ 23ರ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.