ಧಾರಾಕಾರ ಮಳೆಗೆ ಎಮ್ಮೆಮಾಡುವಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ:

ಧಾರಾಕಾರ ಮಳೆಗೆ ಎಮ್ಮೆಮಾಡುವಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ:

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮದ ನಿವಾಸಿ ನಬೀಸ ಎಂಬುವವರ ವಾಸದ ಮನೆಗೆ ಮನೆ ಪಕ್ಕದಲ್ಲಿದ್ದ ಬಾರೀ ಗಾತ್ರದ ಮರ ಉರುಳಿ ಬಿದ್ದು ಮನೆಯ 5 ಶೀಟ್ ಹಾನಿ ಯಾಗಿದ್ದು ಮನೆಯ ಗೋಡೆ ಕೂಡ ಬಿರುಕು ಬಿಟ್ಟು ಅಪಾರ ನಷ್ಟ ಸಂಭವಿಸಿದೆ.

ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲಕ್ಕಿಗೆ ಲೇಖನ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.