ನಾಪೋಕ್ಲು ವರುಣಾರ್ಭಟ : ಕಲ್ಲುಮೊಟ್ಟೆ ಮತ್ತು ಕೊಳಕೇರಿ ಗ್ರಾಮದಲ್ಲಿ ಮನೆಗಳಿಗೆ ಹಾನಿ-ಅಪಾರ ನಷ್ಟ

ನಾಪೋಕ್ಲು ವರುಣಾರ್ಭಟ : ಕಲ್ಲುಮೊಟ್ಟೆ ಮತ್ತು ಕೊಳಕೇರಿ ಗ್ರಾಮದಲ್ಲಿ ಮನೆಗಳಿಗೆ ಹಾನಿ-ಅಪಾರ ನಷ್ಟ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು(Coorgdaily) :ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮೊಟ್ಟೆ ಮತ್ತು ಕೊಳಕೇರಿ ಗ್ರಾಮದಲ್ಲಿ ಹಲವಡೆ ಹಾನಿ ಸಂಭವಿಸಿ ಅಪಾರ ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ.

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮದ ನಿವಾಸಿ ಕೃಷ್ಣ ಎಂಬುವವರ ಮನೆಯ ಮುಂಭಾಗದಲ್ಲಿ ಅಳವಡಿಸಲಾದ ತಡೆಗೋಡೆ ಭಾನುವಾರ ರಾತ್ರಿ ಸೂರಿದ ಧಾರಾಕಾರ ಮಳೆಗೆ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.

ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಕುವಲೆಕ್ಕಾಡು ಗ್ರಾಮದ ನಿವಾಸಿ ಬೀರಾನ್ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಅದರಂತೆ ಕೊಳಕೇರಿ ಗ್ರಾಮದ ನಿವಾಸಿ ಮಮ್ಮು ಎಂಬುವವರ ಅಂಗಡಿ ಮಳಿಗೆಯ ಒಂದು ಭಾಗ ವ್ಯಾಪಕ ಗಾಳಿ ಮಳೆಯಿಂದ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ. ಇದೇ ಗ್ರಾಮದ ನಿವಾಸಿ ಹ್ಯಾರಿಸ್ ಎಂಬುವವರ ಮನೆಯ ಮುಂಭಾಗದ ತಡೆಗೋಡೆ ಕುಸಿದು ಬಿದ್ದು ನಷ್ಟ ಉಂಟಾಗಿದೆ. ಕೊಳಕೇರಿ ತುತ್ತಂಡ ಬಾರಿಕೆ ನಿವಾಸಿ ಅನೀಫಾ ಎಂಬುವವರ ಮನೆಯ ಮೇಲೆ ಮರ ಬಿದ್ದು ಮನೆಯ ಶೀಟ್ ಹಾಗೂ ತೆರೆದೆ ಬಾವಿಯ ರಿಂಗ್ ಗೆ ಹಾನಿ ಉಂಟಾಗಿದ್ದು ಮನೆಯ ಸಮೀಪದ ವಿದ್ಯುತ್ ಕಂಬಕ್ಕೂ ಹಾನಿ ಸಂಭವಿಸಿದೆ.

 ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಪಂಚಾಯತಿ ಸದಸ್ಯ ಕೆ. ವೈ. ಅಶ್ರಫ್ ಹಾಗೂ ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.