ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಮಡಿಕೇರಿ:-ಸೋಮವಾರಪೇಟೆ 66/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಗ ನಿರ್ವಹಣೆ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಫ್2 ಶಾಂತಳ್ಳಿ ಮಾರ್ಗದಲ್ಲಿ ಮೇ, 21 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಯಡೂರು, ತಲ್ತಾರೆಶೆಟ್ಟಳ್ಳಿ, ಕಿರಗಂದೂರು, ತಾಕೇರಿ, ಗಿಜಗನಮನೆ, ತೊಳೂರುಶೆಟ್ಟಳ್ಳಿ, ಕೂತಿ, ಹೊಸಬೀಡು, ಕಲ್ಕಂದೂರು, ಬಸವನಕಟ್ಟೆ, ನಗರಳ್ಳಿ, ಹೆಮನಗದ್ದೆ, ಶಾಂತಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಕುಂದಳ್ಳಿ, ಹೆಗ್ಗಡಮನೆ, ಹರಗ, ಕುಂಬಾರಗಡಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.