ನಿವೇಶನ ರಹಿತ ರಿಗೆ ಈ ವರ್ಷದಲ್ಲಿಯೇ ನಿವೇಶನ ನೀಡಲು ಎ.ಎಸ್.ಪೊನ್ನಣ್ಣ ಖಡಕ್ ಸೂಚನೆ.

ನಿವೇಶನ ರಹಿತ ರಿಗೆ ಈ ವರ್ಷದಲ್ಲಿಯೇ ನಿವೇಶನ ನೀಡಲು ಎ.ಎಸ್.ಪೊನ್ನಣ್ಣ ಖಡಕ್ ಸೂಚನೆ.

ಮಡಿಕೇರಿ:ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಕುಟುಂಬಗಳಿಗೆ ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಗುರುತಿಸಿ ಈ ವರ್ಷದ ಅಂತ್ಯದ ಒಳಗಾಗಿ ನಿವೇಶನ ನೀಡುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಆಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ನಾಪೋಕ್ಲು,ಭಾಗಮಂಡಲ,ಸಂಪಾಜೆ ಹೋಬಳಿಗಳಿಗೆ ಸಂಭಂದಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಟಾಸ್ಕ್ ಪೋರ್ಸ್ ಸಭೆ ನಡೆಸಿದ ಎ.ಎಸ್.ಪೊನ್ನಣ್ಣ ನವರು ವಸತಿ ರಹಿತರು ಮತ್ತು ನಿವೇಶನ ರಹಿತರಿಗೆ ಸೂರು ಒದಗಿಸುವುದು ಸರ್ಕಾರದ ಆದ್ಯತೆಯ ಕಾರ್ಯಕ್ರಮವಾಗಿದ್ದು ಈ ನಿಟ್ಟಿನಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಪೊನ್ನಣ್ಣ ನವರು ಸೂಚನೆ ನೀಡಿದ್ದಾರೆ.ಕಾರುಗುಂದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ತಹಶಿಲ್ದಾರರು,ಕಂದಾಯ ಇಲಾಖೆ,ಗ್ರಾಮ ಪಂಚಾಯತ್ ಅಧಿಕಾರಿಗಳು,ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.