ನೆಲ್ಲಿಹುದಿಕೇರಿ :ಕಿಡ್ನಿ ವೈಫಲ್ಯ ಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದಿಂದ ಧನ ಸಹಾಯ

ನೆಲ್ಲಿಹುದಿಕೇರಿ :ಕಿಡ್ನಿ ವೈಫಲ್ಯ ಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದಿಂದ ಧನ ಸಹಾಯ

ವರದಿ:ಝಕರಿಯ ನಾಪೋಕ್ಲು

ಸಿದ್ದಾಪುರ :ಕೊಡಗು ಜಿಲ್ಲೆಯ ಸಿದ್ದಾಪುರದ ನೆಲ್ಲಿಹುದಿಕೇರಿಯ ಬೆಟ್ಟದ ಕಾಡುವಿನ ನಿವಾಸಿ ತನಿಯಪ್ಪ ಮತ್ತು ಮೀನ ದಂಪತಿಗಳ ಪುತ್ರ ಕಿರಣ್ ಅವರು ಎರಡು ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ನೇತೃತ್ವದಲ್ಲಿ ನಾಡಿನ ದಾನಿಗಳಿಂದ ಸಂಗ್ರಹಗೊಂಡ 52 ಸಾವಿರ ರೂಗಳ ಮೊತ್ತವನ್ನು ಅವರ ಕುಟುಂಬಸ್ಥರಿಗೆ ಸಂಘದ ಪದಾಧಿಕಾರಿಗಳು ಹಸ್ತಾರಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷರಾದ ಕೆ. ಕುಶಾಲಪ್ಪ ಅವರು ಮಾತನಾಡಿ ಬಡತನ ತುಂಬಿದ ಈ ಕುಟುಂಬಕ್ಕೆ ನಾಡಿನ ದಾನಿಗಳಿಂದ ಸಂಗ್ರಹಗೊಂಡ ರೂಪಾಯಿ 52 ಸಾವಿರ ಧನ ಸಹಾಯವನ್ನು ನೀಡಲಾಗಿದೆ. ಮುಂದಿನ ಚಿಕಿತ್ಸೆಗಾಗಿ ಸುಮಾರು 15 ಲಕ್ಷದಷ್ಟು ಬೇಕಾಗಿದ್ದು ನಾಡಿನ ಸಮಸ್ತ ಬಾಂಧವರು ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಪದಾಧಿಕಾರಿಗಳಾದ ಮಂಜು ಬೈಚನಹಳ್ಳಿ, ಯೋಗೀಶ್ ನೆಲ್ಲಿಹುಧಿಕೇರಿ, ರೋಹಿತ್ ನೆಲ್ಲಿಹುದಿಕೇರಿ ಹಾಜರಿದ್ದರು.