ಪೆರುಂಬಾಡಿ:ಅತ್ಯಾಧುನಿಕ ಘನತಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪರಿಶೀಲಿಸಿದ:ಎಎಸ್ ಪೊನ್ನಣ್ಣ ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಘನತಾಜ್ಯ ನಿವಾರಣೆ ಸಮಸ್ಯೆಗೆ ಶಾಶ್ವತ ಪರಿಹಾರ :ಎ.ಎಸ್ ಪೊನ್ನಣ್ಣ

ಪೆರುಂಬಾಡಿ:ಅತ್ಯಾಧುನಿಕ ಘನತಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪರಿಶೀಲಿಸಿದ:ಎಎಸ್ ಪೊನ್ನಣ್ಣ   ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಘನತಾಜ್ಯ ನಿವಾರಣೆ ಸಮಸ್ಯೆಗೆ ಶಾಶ್ವತ ಪರಿಹಾರ :ಎ.ಎಸ್ ಪೊನ್ನಣ್ಣ
ಪೆರುಂಬಾಡಿ:ಅತ್ಯಾಧುನಿಕ ಘನತಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪರಿಶೀಲಿಸಿದ:ಎಎಸ್ ಪೊನ್ನಣ್ಣ   ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಘನತಾಜ್ಯ ನಿವಾರಣೆ ಸಮಸ್ಯೆಗೆ ಶಾಶ್ವತ ಪರಿಹಾರ :ಎ.ಎಸ್ ಪೊನ್ನಣ್ಣ

ವಿರಾಜಪೇಟೆ:ಸಮೀಪದ ಪೆರುಂಬಾಡಿ ಬಳಿ ಉನ್ನತೀಕರಣಗೊಳ್ಳುತ್ತಿರುವ ಲ್ಯಾಂಡ್ ಫೀಲ್ ಏರಿಯಾಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ಹಾಗೂ ಪರಿಶೀಲನೆ ನಡೆಸಿದರು.ಶಾಸಕರ ವಿಶೇಷ ಕಾಳಜಿ ಹಾಗೂ ಪ್ರಯತ್ನದಿಂದಾಗಿ ಪೆರುಂಬಾಡಿ ಭಾಗದಲ್ಲಿ, ಉನ್ನತ ದರ್ಜೆಯ ಅತ್ಯಾಧುನಿಕ ಹಾಗೂ ಪರಿಸರಸ್ನೇಹಿ ಕಸ ವಿಲೇವಾರಿ ಘಟಕಕ್ಕೆ ಸರಕಾರದ ವತಿಯಿಂದ ಅನುದಾನ ಒದಗಿದ್ದು ಈ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಹಿಂದೆ ಸಾರ್ವಜನಿಕರ ಕೋರಿಕೆಗೆ ಮನ್ನಣೆ ನೀಡಿ ಕೆಲವೇ ತಿಂಗಳಲ್ಲಿ ಈ ಅನುದಾನ ತರುವಲ್ಲಿ ಶಾಸಕರು ಮುತುವರ್ಜಿ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂದು ಬೆಳ್ಳಂಬೆಳಗ್ಗೆ ಮಾನ್ಯ ಶಾಸಕರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕೂಲಂಕುಶವಾಗಿ ಕಾಮಗಾರಿಯ ಪ್ರಗತಿಯ ಪರಿಶೀಲನೆ ನಡಿಸಿ ಹಲವು ಸಲಹೆ ಸೂಚನೆ ನೀಡಿದರು.

  ಕಾಮಗಾರಿಯ ಕುರಿತು ವಿವರಣೆ ನೀಡಿದ ಶಾಸಕರು ತಾನು ಹಾಗೂ ಇತರ ಜನಪ್ರತಿನಿಧಿಗಳು ಚರ್ಚೆ ಮಾಡಿ ಈ ಕಾಮಗಾರಿ ತರುವಲ್ಲಿ ಯಶಸ್ವಿಯಾಗಿದ್ದು ಸುಮಾರು 34 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಈ ಘಟಕ ಸಹಕಾರಿಯಾಗಲಿದೆ ಮಾತ್ರವಲ್ಲ ದೀರ್ಘಕಾಲದ ಘನತಾಜ್ಯ ಸಮಸ್ಯೆಗೆ ಇದು ಪರಿಹಾರ ಒದಗಿಸಲಿದೆ ಎಂದು ಹೇಳಿದರು. ಈ ಘಟಕವು ಮೂರು ಹಂತದಲ್ಲಿ ಕಾರ್ಯ ನಿರ್ವಹಿಸಲಿದ್ದು, ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಇದು ಶಾಶ್ವತ ಪರಿಹಾರ ಒದಗಿಸಲಿದೆ ಎಂದು ಹೇಳಿದರು. ಮುಂದುವರೆದು ಸಾರ್ವಜನಿಕರಲ್ಲಿ ಮನವಿ ಮಾಡಿದ ಶಾಸಕರು, ಎಲ್ಲರೂ ತಮ್ಮ ಮನೆಗಳಲ್ಲಿಯೇ ತಾಜ್ಯ ವಸ್ತುಗಳನ್ನು ಪ್ರತ್ಯೇಕಿಕರಿಸಿ ನೀಡಿದಲ್ಲಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತಷ್ಟು ಸುಲಭವಾಗಲಿದೆ ಎಂದು ಕರೆ ನೀಡಿದರು. ವಿಶೇಷವಾಗಿ ಒಣಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ನೀಡಿದಲ್ಲಿ ಅತ್ಯಂತ ಸುಲಭವಾಗಲಿದೆ ಮತ್ತು ಸಾರ್ವಜನಿಕರು ಶುಚಿತ್ವದ ಬಗ್ಗೆ ಜಾಗೃತರಾಗಿ ನಮ್ಮ ಈ ಪ್ರಯತ್ನದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು. ಗುತ್ತಿಗೆದಾರರು ಆದಷ್ಟು ಬೇಗ ಮಳೆಗಾಲ ಪ್ರಾರಂಭವಾಗುವುದಕ್ಕೂ ಮೊದಲೇ ಈ ಕಾಮಗಾರಿಯನ್ನು ಪೂರೈಸಿ ಕೊಡಬೇಕೆಂದು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ವಿರಾಜಪೇಟೆ ಪುರಸಭೆ ಅಧ್ಯಕ್ಷೆ ಶ್ರೀಮತಿ ದೇಚ್ಚಮ್ಮ ಕಾಳಪ್ಪ ,ಉಪಾಧ್ಯಕ್ಷೆ ಶ್ರೀಮತಿ ಫಸಿಹಾ ತಬುಸುಮ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸದಸ್ಯರು ಹಾಗೂ ಪ್ರಮುಖರು ಉಪಸಿತರಿದ್ದರು.