ಪೆರುಂಬಾಡಿ:ಮೇ 16 ರಿಂದ ಕಂಚಿ ಕಾಮಾಕ್ಷಿ ಅಮ್ಮ ಕರಗ ಮಹೋತ್ಸವ

ವಿರಾಜಪೇಟೆ:ಕಂಚಿ ಕಾಮಾಕ್ಷಿ ಅಮ್ಮ ದೇವಾಲಯದ ವಾರ್ಷಿಕ ಕರಗ ಮಹೋತ್ಸವು ಮೇ ತಿಂಗಳ 16 ಮತ್ತು 17 ರಂದು ನಡೆಯಲಿದೆ.
ವಿರಾಜಪೇಟೆ ತಾಲೂಕು ಆರ್ಜಿ ಗ್ರಾಮ ಪಂಚಾಯಿತಿ ಪೆರುಂಬಾಡಿ ಗ್ರಾಮದ ಶ್ರೀ ಕಂಚಿ ಕಾಮಾಕ್ಷಿ ಅಮ್ಮ ವಾರ್ಷಿಕ ಕರಗ ಮಹೋತ್ಸವದ ತಾ 16 ರಂದು ಬೆಳಿಗ್ಗೆ 06 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ವಾರ್ಷಿಕ ಪ್ರತಿಷ್ಠಾಪನಾ ಪೂಜೆ, ಮತ್ತು ಅಭಿಷೇಕ ಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ 03 ಗಂಟಗೆ ಕರಗ ಶ್ರಿಂಗಾರ ನಡೆದು ವಾದ್ಯ ಮೇಳಗಳೊಂದಿಗೆ ಕರಗ ಆರಾಧನೆ ( ಮನೆ, ಮನೆಗಳಿಗೆ ತೆರಳಿ) ಪೂಜೆಗಳು ಪಡೆದು ದೇವಾಲಯಕ್ಕೆ ಆಗಮಿಸಿಸಲಿದೆ. ರಾತ್ರಿ 08 ಗಂಟೆಗೆ ದೇವಿಗೆ ಮಾಹಾಪೂಜೆ ಸಲ್ಲಿಕೆಯಾಗಲಿದ್ದು ನಂತರ ಅನ್ನಸಂತರ್ಪಣೆ ನಡೆಯಲಿದೆ.
ತಾ. 17 ರಂದು ಬೆಳಿಗ್ಗೆ 11 ಗಂಟೆಗೆ ಮಾಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಲಕ್ಕಿ ಡ್ರಾ, ಅನ್ನಸಂತರ್ಪಣೆ ಸಂಜೆ ಕರಗ ವಿಸರ್ಜನೆ ನಡೆಯಲಿದೆ. ದೇವಲಯಾದಲ್ಲಿ ನಡೆಯುವ ವಾರ್ಷಿಕ ಕರಗ ಮಹೋತ್ಸವಕ್ಕೆ ನಾಡಿ ಸರ್ವ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ಮನವಿ ಮಾಡಿದೆ. ಹೆಚ್ಚಿನ ವಿವರಗಳಿಗೆ ಆಡಳಿತ ಮಂಡಳಿಯ 8762109874 ಮತ್ತು 9535851437 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಿದೆ.
ವರದಿ: ಕಿಶೋರ್ ಕುಮಾರ್ ಶೆಟ್ಟಿ