ಬಿಜಿಎಸ್ ಕಪ್ ಕಬಡ್ಡಿ:ಡಾ ಮಂತರ್ ಗೌಡ ನೇತೃತ್ವದಲ್ಲಿ ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ಭೇಟಿ

ಮಡಿಕೇರಿ:ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ, ಒಕ್ಕಲಿಗರ ಯುವ ವೇದಿಕೆ ಕುಶಾಲನಗರ ಪದಾಧಿಕಾರಿಗಳು ಕುಶಾಲನಗರದಲ್ಲಿ ಆಯೋಜಿಸಲಾಗಿರುವ "ಬಿ. ಜಿ ಎಸ್ ಕಪ್" ಕಬಡ್ಡಿ ಪಂದ್ಯಾವಳಿಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರ ನೇತೃತ್ವದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ಸಲ್ಲಿಸಿ,ಶ್ರೀಗಳ ಆಶೀರ್ವಾದ ಪಡೆದರು.