ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಡಾ.ಮಂತರ್ ಗೌಡ

ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ  ಡಾ.ಮಂತರ್ ಗೌಡ
ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ  ಡಾ.ಮಂತರ್ ಗೌಡ

ಮಡಿಕೇರಿ:ಬಾನು ಮುಷ್ತಾಕ್ ರವರ ಕನ್ನಡದ :ಎದೆಯ ಹಣತೆ' ಎಂಬ ಕೃತಿಯನ್ನು 'Heart Lamp' ಎಂಬ ಹೆಸರಿನ ಮೂಲಕ ಇಂಗ್ಲಿಷ್ ಗೆ ಅನುವಾದಿಸಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕೊಡಗಿನ ಹೆಮ್ಮೆಯ ಸುಪುತ್ರಿ ದೀಪಾ ಬಸ್ತಿ ರವರನ್ನು ಮಡಿಕೇರಿಯ ನಿವಾಸದಲ್ಲಿ ಶಾಸಕ ಡಾ.ಮಂತರ್ ಗೌಡ ರವರು ಭೇಟಿ ಮಾಡಿ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಿದರು. ದೀಪಾ ಬಸ್ತಿ ರವರೊಂದಿಗೆ ಸಮಾಲೋಚನೆ ನಡೆಸಿದ ಶಾಸಕ ಡಾ.ಮಂತರ್ ಗೌಡ ರವರು ಲೇಖನದ ಬಗೆಗೆ ಮಾಹಿತಿಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ದೀಪಾ ಬಸ್ತಿ ರವರ ಪೋಷಕರು, ಪತ್ರಕರ್ತರಾದ ಅನಿಲ್ ಹೆಚ್ ಟಿ ರವರು ಉಪಸ್ಥಿತರಿದ್ದರು.