ಭಾರತೀಯ ಸೈನಿಕರ ಶ್ರೇಯಸ್ಸಿಗಾಗಿ ಪಾಲಿಬೆಟ್ಟ ಪೂಜೆ, ಪ್ರಾರ್ಥನೆ ಭಯೋತ್ಪಾದಕರ ಸರ್ವನಾಶವಾಗಲಿ: ವಿಜು ಸುಬ್ರಮಣಿ

ಸಿದ್ದಾಪುರ :ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಪಾಲಿಬೆಟ್ಟದ ಗಣಪತಿ ದೇವಸ್ಥಾನ ಹಾಗೂ ಲೂಡ್ಸ್ ಮಾತ ಚರ್ಚ್ ಮತ್ತು ಆರ್ಕಾಡ್ ಬಾಬಾ ದರ್ಗಾದಲ್ಲಿ   ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.

ಮಾಜಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮುಖಂಡ ವಿಜು ಸುಬ್ರಮಣಿ ಮಾತನಾಡಿ,ಕಾಶ್ಮೀರ ಪ್ರವಾಸಕ್ಕೆ ತೆರಳಿದ ಪ್ರವಾಸಿಗರ ಮೇಲೆ ದಾಳಿ ನಡೆಸಿ ಅಮಾಯಕರನ್ನು ಬಲಿ ತೆಗೆದುಕೊಂಡ ಉಗ್ರರನ್ನ ಮಟ್ಟಹಾಕುವಲ್ಲಿ ಭಾರತದ ಸೇನೆ ಯಶಸ್ವಿಯಾಗಿದ್ದು ಸೇನಾ ಯೋಧರಿಗೆ ಮತ್ತಷ್ಟು ಬಲಸ್ಥೈರ್ಯ ತುಂಬಲು  ಪಾಲಿಬೆಟ್ಟದ ದೇವಸ್ಥಾನ ಚರ್ಚ್ ಹಾಗೂ ದರ್ಗಾದಲ್ಲಿ ಒಗ್ಗಟ್ಟಿನ ಮೂಲಕ ಪೂಜೆ ಪ್ರಾರ್ಥನೆ ನೆರೆವೇರಿಸಲಾಗಿದೆ.ಭಾರತ ದೇಶದ ಜನರು ಒಗ್ಗಟ್ಟಿನ ಮೂಲಕ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ಭಾರತೀಯ ಸೈನ್ಯಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ.ಉಗ್ರರನ್ನ ಸಂಪೂರ್ಣ ಮಟ್ಟ ಹಾಕಲು ಭಾರತದ ಸೈನಿಕರಿಗೆ ಬೆಂಬಲವಾಗಿ ನಿಲ್ಲೋಣ ಎಂದರು.

 ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ದೂಜಾ ವೇಗಸ್, ಉಪಾಧ್ಯಕ್ಷ ರಾಜಪ್ಪ, ಚರ್ಚ್ ಫಾದರ್ ಮರಿಯ ಜಾರ್ಜ್, ತಮಿಳು ಸಂಘದ ಜಿಲ್ಲಾಧ್ಯಕ್ಷ ಮೈಕಲ್, ತಾಲೂಕು ಭಾಜಪ ಸಮಿತಿ ಸದಸ್ಯ ಪ್ರಶಾದ್ ಕುಮಾರ್, ಆಟೋ ಚಾಲಕ ಸಂಘದ ಕ್ರೀಡಾ ಸಮಿತಿಯ ಅಧ್ಯಕ್ಷ ಪವನ್ ಕುಮಾರ್, ಪ್ರಮುಖರಾದ ಸಿಯಾದ್ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪ್ರಮುಖರಾದ ರಾಜಕೀಯ ಪಕ್ಷಗಳ ಪ್ರಮುಖ ಹಾಜರಿದ್ದರು.