ಮರ ಬಿದ್ದು ಚೆಟ್ಟಳ್ಳಿ-ಮಡಿಕೇರಿ ರಸ್ತೆ ಬಂದ್! ಅಬ್ಯಾಲ ಸಮೀಪ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತ

ಮರ ಬಿದ್ದು ಚೆಟ್ಟಳ್ಳಿ-ಮಡಿಕೇರಿ ರಸ್ತೆ ಬಂದ್!  ಅಬ್ಯಾಲ ಸಮೀಪ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತ
ರಸ್ತೆಯಲ್ಲಿ ಮರ ಬಿದ್ದಿರುವ ದೃಶ್ಯ.

ಚೆಟ್ಟಳ್ಳಿ(Coorgdaily): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ಅಬ್ಯಾಲ ಸಮೀಪದಲ್ಲಿ ಬೃಹತ್ ಮರವೊಂದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.ರಾತ್ರಿ 9.30 ಗಂಟೆಗೆ ಅಬ್ಯಾಲ ಬಳಿ ಮರ ಬಿದ್ದಿದ್ದು ನಾಳೆ ಬೆಳಗ್ಗೆವರೆಗೆ ಮರ ತೆರವುಗೊಳಿಸುವುದು ಕಷ್ಟಸಾಧ್ಯವಾಗಿದೆ.ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಾಹನಗಳು ಮಡಿಕೇರಿಗೆ,ನೆಲ್ಲಿಹುದಿಕೇರಿ-ಅತ್ತಿಮಂಗಲ-ಮರಗೋಡು ಹಾಗೂ ಕತ್ತಲೆಕಾಡು ರಸ್ತೆ ಮಾರ್ಗವಾಗಿ ಮಡಿಕೇರಿ ತಲುಪಬಹುದಾಗಿದೆ.