ಮಾಲ್ದಾರೆ:ಚಿರತೆ ದಾಳಿಗೆ ಹಸು ಬಲಿ

ಮಾಲ್ದಾರೆ:ಚಿರತೆ ದಾಳಿಗೆ ಹಸು ಬಲಿ
ಚಿರತೆ ದಾಳಿಗೆ ಬಲಿಯಾದ ಹಸು

ಸಿದ್ದಾಪುರ (Coorgdaily): ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ಥಾನ ಹಾಡಿಯಲ್ಲಿ ಚಿರತೆ ದಾಳಿಗೆ ನಾಲ್ಕುವರೆ ವರ್ಷದ ಹಸು ಬಲಿಯಾಗಿದೆ.ಗ್ರಾಮದ ಎಚ್. ಸಿ. ಮಾಲ ಎಂಬ ರೈತನಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.ವಿಷಯ ತಿಳಿದು, ಕುಶಾಲನಗರ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಧಿಕಾರಿ ನವೀನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  ಕುಂಞಣ್ಣ, ಸ್ಥಳ ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.