ರಸ್ತೆ ಅಪಘಾತ: ಶಿಕ್ಷಕ ಹೆಂಡ್ರಿ ಲೋಬೊ ನಿಧನ!

ಮಡಿಕೇರಿ:ಎರಡು ದಿನಗಳ ಮಡಿಕೇರಿ-ಕುಶಾಲನಗರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಳಿ ಕಾರಿ ಮತ್ತು ಬೈಕ್ ಅಪಘಾತ ಸಂಭವಿಸಿದ ಘಟನೆ ನಡೆದಿತ್ತು.ಬೈಕ್ ಚಾಲಕ ಹೆಂಡ್ರಿ ಲೋಬೊ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕ ಹೆಂಡ್ರಿ ಲೋಬೊ (41) ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಆರ್ಜಿ ಧರ್ಮಕೇಂದ್ರಕ್ಕೆ ಸೇರಿದ ಹೆಂಡ್ರಿ ಲೋಬೊ ರವರ ಅಂತ್ಯ ಕ್ರಿಯೆಯ ಬಲಿಪೂಜೆ ನಾಳೆ 26-06-2025 ರಂದು ಬೆಳಿಗ್ಗೆ 10:00 ಗಂಟೆಗೆ ಆರ್ಜಿ ಸಂತ ಅಂತೋಣಿಯವರ ದೇವಾಲಯದಲ್ಲಿ ನೆರವೇರಿಸಲಾಗುವುದು. ತದ ನಂತರ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ.