ರಾಜ್ಯಮಟ್ಟದ ಮೊಗೇರ ಕ್ರಿಕೆಟ್ ಕಪ್: ಡೋಮಿನೇಟರ್ ಇಲೆವೆನ್ ಮಾರ್ಗೊಲ್ಲಿ ಚಾಂಪಿಯನ್, ಫ್ರೆಂಡ್ಸ್ ಇಲೆವೆನ್ ಉಡುಪಿ ರನ್ನರ್ಸ್
ಮಡಿಕೇರಿ: ಅಮೃತ ಯುವ ಮೊಗೇರ ಅಮ್ಮತಿ ಹೋಬಳಿ ಸಿದ್ದಾಪುರ (ರಿ) ಇವರ ವತಿಯಿಂದ 3ನೇ ವರ್ಷದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ಡೋಮಿನೇಟರ್ ಇಲೆವೆನ್ ಮಾರ್ಗೊಳ್ಳಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫ್ರೆಂಡ್ಸ್ ಇಲೆವೆನ್ ಉಡುಪಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ನಗರದ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 36 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.
ಮೊದಲ ಸೆಮಿ ಫೈನಲ್ ಪಂದ್ಯವು ಡೋಮಿನೇಟರ್ ಇಲೆವೆನ್ ಮಾರ್ಗೊಲ್ಲಿ ಹಾಗೂ ಶ್ರೀ ವಿನಾಯಕ ಮಕ್ಕಂದೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡೋಮಿನೇಟರ್ ಇಲೆವೆನ್ ಮಾರ್ಗೊಲ್ಲಿ ತಂಡ 22 ರನ್ ಗಳ ಭರ್ಜರಿ ಜಯದೊಂದಿಗೆ ಫೈನಲ್ ಗೆ ಲಗ್ಗೆ ಇಟ್ಟಿತು.
ದ್ವಿತೀಯ ಸೆಮಿಫೈನಲ್ ಪಂದ್ಯವು ಫ್ರೆಂಡ್ಸ್ ಇಲೆವೆನ್ ಉಡುಪಿ ಹಾಗೂ ಟೀಮ್ 18 ಚಿಕ್ಕಮಗಳೂರು ನಡುವೆ ನಡೆದ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡವು 19 ರನ್ ಗಳ ಜಯ ಸಾಧಿಸಿ ಫೈನಲ್ ಗೆ ದ್ವಿತೀಯ ತಂಡವಾಗಿಅರ್ಹತೆ ಪಡೆದುಕೊಂಡಿತು.ಫೈನಲ್ ಪಂದ್ಯವು ಡೋಮಿನೇಟರ್ ಇಲೆವೆನ್ ಮಾರ್ಗೊಲ್ಲಿ ಹಾಗೂ , ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಫ್ರೆಂಡ್ಸ್ ಇಲೆವೆನ್ ಉಡುಪಿ ವಿರುದ್ಧ ಡೋಮಿನೇಟರ್ ಇಲೆವೆನ್ ಮಾರ್ಗೊಳ್ಳಿ ತಂಡವು7 ವಿಕೆಟ್ ಗಳ ಜಯಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಕ್ರೀಡಾಕೂಟದಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಕೆರೇಬಿಯನ್ ಸ್ಟಾರ್ ಸಕಲೇಶಪುರ ತಂಡದ ಲೋಹಿತ್ ಪಡೆದುಕೊಂಡರೆ, ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಶ್ರೀ ವಿನಾಯಕ ಮಕ್ಕಂದೂರು ತಂಡದ ಪ್ರವೀಣ್ ಪಡೆದುಕೊಂಡರು. ಉತ್ತಮ ಬೌಲರ್ ಪ್ರಶಸ್ತಿಯನ್ನು ಟೀಮ್ 18 ಚಿಕ್ಕಮಗಳೂರು ತಂಡದ ಜಗದೀಶ್ ಪಡೆದರೆ ಕ್ರೀಡಾ ಕೂಟದ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಫ್ರೆಂಡ್ಸ್ ಇಲೆವೆನ್ ಉಡುಪಿ ತಂಡದ ವಿವೇಕ್ ಪಡೆದು ಕೊಂಡರು.
ವರದಿ:ಅಶೋಕ್ ಮಡಿಕೇರಿ